Friday, March 29, 2024
spot_img
More

    Latest Posts

    SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

    ಬೆಂಗಳೂರು (ನ. 26): ಎಸ್‌ಎಸ್‌ಎಲ್‌ಸಿ (SSLC Students ) ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ಶೇ. 20 ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. 

    ಕೊರೋನಾದಿಂದ ಪ್ರಸಕ್ತ ಶೈಕ್ಷಣಿಕ ವರ್ಷ (Academic Year) ತಡವಾಗಿ ಆರಂಭವಾಗಿದೆ. ಪ್ರತಿವರ್ಷ ಭೋದನೆಗೆ 240 ಕ್ಕೂ ಹೆಚ್ಚು ದಿನಗಳು ಸಿಗುತ್ತಿತ್ತು. ಈ ವರ್ಷ 140 ಕ್ಕೂ ಕಡಿಮೆ ದಿನಗಳು ಸಿಕ್ಕಿವೆ. ಕಡಿಮೆ ಕಾಲಾವಧಿ ಇದೆಯೆಂದು ಶಿಕ್ಷಕರು ಬೇಗ ಬೇಗ ಪಾಠ (Syllabus)  ಮುಗಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಒತ್ತಡವಾಗುತ್ತಿದೆ. ಹಾಗಾಗಿ ಪಠ್ಯ ಕಡಿತಗೊಳಿಸಿ ಎಂದು ಶಿಕ್ಷಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ಸರ್ಕಾರ ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾಗಿದೆ. ಇಂದು ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳಲಿದೆ. 

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss