Friday, April 19, 2024
spot_img
More

    Latest Posts

    ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ : ಕಲ್ಯಾಣ ಯೋಜನೆಗಳ ಧನಸಹಾಯ ಪರಿಷ್ಕರಣೆ

    ಬೆಂಗಳೂರು : ಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕಾರ್ಮಿಕ ಕಲ್ಯಾಣ ಯೋಜನೆಯ ಸೌಲಭ್ಯಗಳ ಧನಸಹಾಯ ಆಯೋಗ ಮಹಿಳಾ ಕಾರ್ಮಿಕರಿಗೆ ಮೊದಲ ಎರಡು ಹೆರಿಗೆ ಸಂದರ್ಭದಲ್ಲಿ ತಲಾ 10 ರೂ. ಭತ್ತೆ ಘೋಷಿಸಲಾಗಿದೆ.

    ಕಲ್ಯಾಣ ಯೋಜನೆಗಳ ಧನ ಸಹಾಯ ಇದೇ ಮೊದಲ ಬಾರಿಗೆ ಮಹಿಳಾ ಕಾರ್ಮಿಕರ ಮೊದಲ ಎರಡು ಹೆರಿಗೆಗೆ ತಲಾ 10 ಸಾವಿರ ರೂ. ಭತ್ತೆ ಘೋಷಿಸಲಾಗಿದೆ. ಇದರಿಂದ ಸಂಘಟಿತ ವಲಯದ 41 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ಅನುಕೂಲವಾಗಲಿದೆ. ಪರಿಷ್ಕರಿಸಿದ ಮೊತ್ತ ಮತ್ತು ಹೊಸ ಯೋಜನೆಗಳ ವೆಚ್ಚವನ್ನು ಮಂಡಳಿಯಲ್ಲಿ ಕಾರ್ಮಿಕರಿಂದ ಮತ್ತು ಉದ್ಯೋಗಾದಾತ ಸಂಸ್ಥೆ ಕಾರ್ಖಾನೆ ಮಾಲಕರಿಂದ 20:40 ಅನುಪಾತದಲ್ಲಿ ಸ್ವೀಕರಿಸುವ ವಂತಿಗೆ ಮೊತ್ತದಿಂದ ಭರಿಸಲಾಗುತ್ತದೆ. ಈ ಪರಿಷ್ಕೃತ ಸೌಲಭ್ಯ 2021 ರ ಜೂನ್ 22 ರಿಂದ ಅನ್ವಯವಾಗಲಿದೆ.

    ಇನ್ನು ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ಯೋಜನೆಯಡಿ 8 ರಿಂದ 10 ನೇ ತರಗತಿ ವರೆಗಿನ ಮಕ್ಕಳಿಗೆ ವಾರ್ಷಿಕ 3 ಸಾವಿರ ರೂ., ಪಿಯುಸಿ, ಡಿಪ್ಲೋಮಾ, ಐಟಿಐ ಇತ್ಯಾದಿ ಕೋರ್ಸ್ ಗಳಿಗೆ 4 ಸಾವಿರ ರೂ. ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗೆ ತಲಾ 5 ಸಾವಿರ ರೂ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಇದು ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಿಗಲಿದೆ.

    ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಜಾರಿಗೊಳಿಸಿರುವ ಕಲ್ಯಾಣ ಯೋಜನೆಗಳ ಧನಸಹಾಯವನ್ನು ಪರಿಷ್ಕರಿಸಲಾಗಿದೆ. ಗಾರ್ಮೆಂಟ್, ಹೋಟೆಲ್ ಸೇರಿದಂತೆ 70 ಕ್ಕೂ ಹೆಚ್ಚು ಅಧಿಸೂಚಿತ ಉದ್ಯೋಗಗಳಲ್ಲಿ ಸೇವಾ, ಉತ್ಪಾದನಾ ವಲಯದ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss