ಮಂಗಳೂರು: ಅಕ್ಟೋಬರ್ 8 ರಿಂದ 21 ರ ನಡುವೆ ಪ್ರಯಾಣಿಕರಿಂದ ಸುಮಾರು 1.59 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದುಬೈಯಿಂದ ಮಂಗಳೂರಿಗೆ ಬಂದಿದ್ದ 5ಮಂದಿ ಪುರುಷ ಪ್ರಯಾಣಿಕರು ಜೀನ್ಸ್ ಪ್ಯಾಂಟ್, ಒಳ ಉಡುಪು ಮತ್ತು ಗುದನಾಳದ ಒಳಗೆ ಘನ ಗಮ್ನೊಂದಿಗೆ ಪೇಸ್ಟ್ ಅಥವಾ ಪುಡಿ ರೂಪದಲ್ಲಿ ಚಿನ್ನವನ್ನು ಮರೆಮಾಚಿ ವಿವಿಧ ವಿಧಾನಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು. ಪ್ರಯಾಣಿಕರು ಚಿನ್ನವನ್ನು ಹೊಂದಿರುವ ಕೆಲವು ದ್ರಾವಣದಲ್ಲಿ ಅದ್ದಿದ ಟವೆಲ್ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದೂ ಕಂಡುಬಂದಿದೆ. ಇದನ್ನು ಪತ್ತೆಹಚ್ಚಿದ ಅಧಿಕಾರಿಗಳು ತಡೆದು ವಶಪಡಿಸಿಕೊಂಡಿದ್ದಾರೆ.
