Monday, November 28, 2022

ಸಮಾಜದ ಎಲ್ಲಾ ವರ್ಗದ ಜನರಿಗೆ ನೆರವು : ಐಕಳ ಹರೀಶ್ ಶೆಟ್ಟಿ

ಮಂಗಳೂರು: ಬಂಟ ಸಮಾಜದ ಸಂಘಟನೆಯ ಮೂಲಕ ಇತರ ಸಮಾಜದ ವರ್ಗಕ್ಕೂ ಮುಕ್ತ ನೆರವು ನೀಡುವ ಮೂಲಕ ಸಮಾಜದಲ್ಲಿ ಮೇಲ್ಪಂಕ್ತಿಗೆ ಕಾರಣವಾಗಿರುವ ಒಕ್ಕೂಟಕ್ಕೆ ಸಮಾಜ ಬಾಂಧವರಿಂದ ನೀಡುತ್ತಿರುವ ಸ್ಪಂದನೆಯೇ ಮೂಲ ಕಾರಣವಾಗಿದೆ....
More

  Latest Posts

  ಮಂಗಳೂರು: ಪತ್ನಿಯ ಕೊಲೆಗೈದ ಪತಿಯ ಬಂಧನ

  ಬಜ್ಪೆ: ಮಹಿಳೆಯೋರ್ವರನ್ನು ದೊಣ್ಣೆಯಿಂದ ಹೊಡೆದು ಕೊಲೆ‌ಮಾಡಿದ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ‌ ನಡೆದಿದೆ. ಸರಿತಾ(35)ಕೊಲೆಯಾದ ಮಹಿಳೆ.ಕುಡುಕನಾಗಿದ್ದ ಪತಿ ದುರ್ಗೇಶ್ ಸರಿತಾಗೆ...

  ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣ: ಕರಾವಳಿ ಜನರು ಸದಾ ಜಾಗೃತರಾಗಿರಬೇಕು – ಪೇಜಾವರ ಶ್ರೀ

  ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ...

  ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ತಂಡದಿಂದ ಹಲ್ಲೆ

  ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು...

  ಕುಕ್ಕೆ ಸುಬ್ರಹ್ಮಣ್ಯದಲ್ಲಿ 2 ವರ್ಷಗಳ ಬಳಿಕ ನಡೆದ ಎಡೆಮಡೆಸ್ನಾನ ಸೇವೆ

  ಇತಿಹಾಸ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಆಚರಣೆ ನಡೆಯುತ್ತಿದ್ದು ಇದರ ಅಂಗವಾಗಿ ನಡೆಯುವ ಎಡೆಮಡೆಸ್ನಾನ ಬರೋಬ್ಬರಿ ಎರಡು ವರ್ಷಗಳ ಬಳಿಕ ಇಂದು ನಡೆದಿದೆ.

  ಮುಖದಲ್ಲಿ ಅರಳಿದ ‘ಗಂಧದ ಗುಡಿ’: ಮಂಗಳೂರಿನ ಮೇಕಪ್ ಆರ್ಟಿಸ್ಟ್ ಕೈಚಳಕ

  ಮಂಗಳೂರು: ಅಪ್ಪು ಕೊನೆಯ ಚಿತ್ರ ಗಂಧದಗುಡಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಈ ಮಧ್ಯೆ ಅಪ್ಪು ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ನೆನಪುಗಳನ್ನು ಹಸಿರಾಗಿಡಲು ವಿಭಿನ್ನವಾಗಿ ಪ್ರಯತ್ನಿಸ್ತಾ ಇದಾರೆ. ಈ ಮಧ್ಯೆ ಮಂಗಳೂರಿನ ಅಪ್ಪು ಆಭಿಮಾನಿಯೊಬ್ಬರು ‘ಗಂಧದ ಗುಡಿ’ ಫೇಸ್ ಪೇಂಟಿಂಗ್ ಮೂಲಕ ಪುನೀತ್ ಗೆ ವಿಭಿನ್ನ ಗೌರವ ಸಲ್ಲಿಸಿದ್ದಾರೆ.

  ಅಪ್ಪು‌ ನಟನೆಯ ಗಂಧದ ಗುಡಿ ಸಿನಿಮಾ ಜನ ಮಾನಸವನ್ನು ಸೆಳೆಯುತ್ತಿದೆ. ಈ ಹೊತ್ತಲ್ಲಿ ಮೇಕಪ್ ಆರ್ಟ್ ಮೂಲಕ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಬ್ಯೂಟಿಷಿಯನ್, ಅಪ್ಪು ಅವರ ಅಭಿಮಾನಿ, ಮಂಗಳೂರಿನ ಬೆಂದೂರ್ ವೆಲ್‌ನಲ್ಲಿರುವ ಹೆಸರಾಂತ ಚೇತನಾ ಬ್ಯೂಟಿ ಲೌಂಜ್‌ನ ಚೇತನಾ ಅವರ ಕೈ ಚಳಕದಲ್ಲಿ ಅಪ್ಪು ಅಭಿನಯದ “ಗಂಧದ ಗುಡಿ” ಫೇಸ್ ಪೇಂಟಿಂಗ್ ಬಹಳ ಅದ್ಭುತವಾಗಿ ಮೂಡಿಬಂದಿದೆ. ಈ ಸುಂದರ ಆರ್ಟ್ ಮೂಲಕ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿಕೊಂಡು ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭ ಕೋರಿದ್ದಾರೆ. ಜೊತೆಗೆ ಕರ್ನಾಟಕ ರತ್ನ ಪುನೀತ್ ಗೆ ಗೌರವ ಸಲ್ಲಿಸಿದ್ದಾರೆ. ಮೇಕಪ್ ಆರ್ಟಿಸ್ಟ್ ಚೇತನಾ, ಪುನೀತ್ ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿಯೂ ಹೌದು. ಅಪ್ಪು ಅಭಿನಯದ ಕೊನೆಯ ಚಿತ್ರ “ಗಂಧದ ಗುಡಿ” ಸಿನಿಮಾದಿಂದ ಪ್ರೇರಣೆಗೊಂಡು, ಆ ಸಿನಿಮಾದ ಪ್ರಾಕೃತಿಕ ಕಲ್ಪನೆಯನ್ನು ತಮ್ಮ ಕಲೆಯ ಮೂಲಕ ಬಿಂಬಿಸಿದ್ದಾರೆ ಚೇತನಾ. ಗಂಧದ ಗುಡಿಯ ಸಂಪೂರ್ಣ ದೃಶ್ಯವನ್ನು ಕೇವಲ ಒಂದು ಮೊಗದ ಮೇಲೆ ಸುಂದರವಾಗಿ ಚಿತ್ರಿಸಿ ಕಲಾ ಲೋಕ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಗಂಧದ ಗುಡಿ ಚಿತ್ರದಲ್ಲಿ ಕಂಡು ಬರುವ ಹಸಿರಿನ ಬನಸಿರಿಯನ್ನು ವಿದ್ಯಾರ್ಥಿಯೊಬ್ಬನ ಮುಖದ ಮೇಲೆ ಚಿತ್ರಿಸುವ ಮೂಲಕ ಯುವ ರತ್ನ ಪುನೀತ್ ಅವರ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. ಅದರ ಜೊತೆಯಲ್ಲಿ, “ಕಾಡನ್ನು ರಕ್ಷಿಸಿ-ಪ್ರಾಣಿಗಳನ್ನು ಉಳಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮ ಕಲೆಯನ್ನು ಅನಾವರಣಗೊಳಿಸಿದ್ದು, ಅವರ ಪರಿಸರ ಪ್ರೇಮವನ್ನು ಕೂಡ ಪ್ರತಿಬಿಂಬಿಸುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ, ಯುವತಿಯೊಬ್ಬಳ ಮೊಗದ ಮೇಲೆ ಮೂರನೇ ಕಣ್ಣಿನ ಆರ್ಟ್ ಚಿತ್ರಿಸುವ ಮೂಲಕ ಜನಮನ ಸೆಳೆದಿದ್ದರು. ಅವರ ಈ ಮೂರನೇ ಕಣ್ಣಿನ ಫೇಸ್ ಪೇಂಟಿಂಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತಲ್ಲದೇ, ಕಲಾ ಪ್ರೇಮಿಗಳ ಹೃದಯ ಗೆದ್ದಿತ್ತು.

  ಯಕ್ಷಗಾನ ರಂಗದಲ್ಲಿ ಸದಾ ಬಣ್ಣಹಚ್ಚಿ ಕುಣಿಯುವ ಯಕ್ಷಗಾನ ಕಲಾವಿದ, ಮಾಡೆಲ್, ಬಿಬಿಎ ವಿದ್ಯಾರ್ಥಿ ಭುವನ್ ಶೆಟ್ಟಿ ಅವರು ಈ ಗಂಧದ ಗುಡಿಯ ಚಿತ್ರಕಲೆಗೆ ಸಹಕರಿಸಿದ್ದಾರೆ. ಅಲ್ಲದೇ ಚೇತನಾ ಅವರ ಈ ವಿಭಿನ್ನ ಕಲಾಕುಂಚವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದು, ಖ್ಯಾತ ಛಾಯಚಿತ್ರಗಾರ ಪುನೀಕ್ ಶೆಟ್ಟಿ. ಚೇತನಾ ಬ್ಯೂಟಿ ಲೌಂಜ್‌ನ ಚೇತನಾ ಅವರು ರಿಯಲಿಸ್ಟಿಕ್‌ ಮೇಕಪ್‌, ಫೇಸ್‌ ಪೇಂಟಿಂಗ್‌ ಹಾಗೂ ಇನ್ನಿತರ ವಿಭಿನ್ನ ವಿನೂತನ ಪ್ರಯೋಗಗಳ ಮೂಲಕವೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

  Latest Posts

  ಮಂಗಳೂರು: ಪತ್ನಿಯ ಕೊಲೆಗೈದ ಪತಿಯ ಬಂಧನ

  ಬಜ್ಪೆ: ಮಹಿಳೆಯೋರ್ವರನ್ನು ದೊಣ್ಣೆಯಿಂದ ಹೊಡೆದು ಕೊಲೆ‌ಮಾಡಿದ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ‌ ನಡೆದಿದೆ. ಸರಿತಾ(35)ಕೊಲೆಯಾದ ಮಹಿಳೆ.ಕುಡುಕನಾಗಿದ್ದ ಪತಿ ದುರ್ಗೇಶ್ ಸರಿತಾಗೆ...

  ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣ: ಕರಾವಳಿ ಜನರು ಸದಾ ಜಾಗೃತರಾಗಿರಬೇಕು – ಪೇಜಾವರ ಶ್ರೀ

  ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ...

  ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ತಂಡದಿಂದ ಹಲ್ಲೆ

  ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು...

  ಕುಕ್ಕೆ ಸುಬ್ರಹ್ಮಣ್ಯದಲ್ಲಿ 2 ವರ್ಷಗಳ ಬಳಿಕ ನಡೆದ ಎಡೆಮಡೆಸ್ನಾನ ಸೇವೆ

  ಇತಿಹಾಸ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಆಚರಣೆ ನಡೆಯುತ್ತಿದ್ದು ಇದರ ಅಂಗವಾಗಿ ನಡೆಯುವ ಎಡೆಮಡೆಸ್ನಾನ ಬರೋಬ್ಬರಿ ಎರಡು ವರ್ಷಗಳ ಬಳಿಕ ಇಂದು ನಡೆದಿದೆ.

  Don't Miss

  ಚಾರ್ಮಾಡಿ : ಆಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿ

  ಚಿಕ್ಕಮಗಳೂರು: ಅಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಚಾರ್ಮಾಡಿ...

  ಡಿ.2 ರಂದು ತುಳುವಿನಲ್ಲಿ ಕಾಂತಾರ ಬಿಡುಗಡೆ

  ಬೆಂಗಳೂರು: ಕೊನೆಗೂ ತುಳು ಭಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಡಿಸೆಂಬರ್ 2 ರಂದು ತುಳು ಬಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಯಾಗಲಿದೆ. ಕಾಂತಾರ ಇದೀಗ ಬಿಡುಗಡೆಯಾದ...

  ಮದುವೆಗೆ ಒಪ್ಪದ ಮಗಳನ್ನೇ ಕತ್ತು ಸೀಳಿ ಕೊಂದ ತಾಯಿ!

  ಕುಟುಂಬದವರು ನೋಡಿದ ಹುಡುಗನನ್ನು ಮದುವೆ ಆಗಲು ಒಪ್ಪಲಿಲ್ಲ ಅಂತ 20 ವರ್ಷದ ಮಗಳನ್ನೇ ತಾಯಿ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

  ಉಡುಪಿ: ರೋಸ್ ಸಮಾರಂಭದಲ್ಲಿ ಯುವತಿ ಕುಸಿದು ಬಿದ್ದು ಸಾವು

  ಉಡುಪಿ: ಕ್ರಿಶ್ಚಿಯನ್ನರ ಮನೆಯಲ್ಲಿ ನಡೆಯುವ ರೋಸ್ ಸಮಾರಂಭಕ್ಕೆ ಆಗಮಿಸಿದ್ದ ಯುವತಿಯೊಬ್ವರು ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಮೃತ ಯುವತಿಯನ್ನು ಹಾವಂಜೆ...

  ರಿಯಲ್​ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

  ಬೆಂಗಳೂರು: ಸ್ಯಾಂಡಲ್​ವುಡ್​ ನಟ ರಿಯಲ್ ಸ್ಟಾರ್​ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದು ನೆಲಮಂಗಲದಲ್ಲಿರುವ ಹರ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಇಂದು ಏಕಾಏಕಿ ಮೂಗು ಬ್ಲಾಕ್​ ಆಗಿ, ಉಸಿರಾಟಕ್ಕೆ ತೊಂದರೆಯಾಗಿತ್ತು. ಹೀಗಾಗಿ ಆಸ್ಪತ್ರೆಗೆ...