Monday, November 29, 2021

ಮಂಗಳೂರು: ‘ಡಿ. 8ರವರೆಗೆ ಕೊರೊನಾ ಮಾರ್ಗಸೂಚಿ ವಿಸ್ತರಣೆ’

ಕೋವಿಡ್-19 ಕಣ್ಣಾವಲು, ನಿಯಂತ್ರಣ ಮತ್ತು ಜಾಗೃತಿಗೆ ಸಂಬಂಧಿಸಿದ ಮಾರ್ಗಸೂಚಿಗಳು ಹಾಗೂ ಈ ಮಾರ್ಗಸೂಚಿಗಳಿಗೆ ಸಂಬಂಧಿಸಿ ಹೊರಡಿಸಿರುವ ಸರ್ಕಾರದ ವಿಸ್ತರಣೆ ಆದೇಶಗಳನ್ನು ಡಿಸೆಂಬರ್ 8ರ ಬೆಳಗ್ಗೆ 6 ಗಂಟೆವರೆಗೆ ಮುಂದುವರಿಸಿ ಆದೇಶ...
More

    Latest Posts

    ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

    ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

    ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

    ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

    ಸಾರ್ವಜನಿಕ ಬಸ್ಸು ತಂಗುದಾಣವನ್ನು ಅಡುಗೆ ಮನೆ ಮಾಡಿದ ಕೂಲಿ ಕಾರ್ಮಿಕರು……! ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

    ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿ ದೇವಸ್ಥಾನದ ಎದುರುಗಡೆ ಇರುವ ಬಸ್ ತಂಗುದಾಣದಲ್ಲಿ ಕೆಲ ದಿನಗಳಿಂದ ಯಾವುದೊ ಕೂಲಿ ಕಾರ್ಮಿಕರು ಮನೆಯಂತೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಅಡುಗೆ ಮಾಡಿ ವಾಸಿಸುತ್ತಿದ್ದಾರೆ.

    ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಅಗ್ನಿ ಅವಗಢ; ಅಗ್ನಿಶಾಮಕ ದಳ ಆಗಮನ

    ಬೆಂಗಳೂರು: ನಗರದ ಕೆ.ಆರ್.‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಕೊರಿಯರ್‌ ಗೋಡೌನ್‌ನಿಂದ ದಟ್ಟ ಹೊಗೆ ಹರಡಿದೆ. ಕೆ.ಆರ್‌. ಮಾರುಕಟ್ಟೆಯ ಗೋಡೌನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ....

    ಗಾಜಿಯಾಬಾದ್ : ಸರಣಿ ಅಪಘಾತ- 24ಕ್ಕೂ ಹೆಚ್ಚು ವಾಹನಗಳು ಜಖಂ; ನಿವೃತ್ತ ಪೊಲೀಸ್​ ಫ್ಯಾಮಿಲಿ ಸೇರಿ ಐವರು ಸಾವು!

    ಗಾಜಿಯಾಬಾದ್ : ಎರಡು ಪ್ರತ್ಯೇಕ ಅಪಘಾತಗಳಲ್ಲಿ 24 ವಾಹನಗಳು ಜಖಂಗೊಂಡ್ರೆ, ನಿವೃತ್ತ ಪೊಲೀಸ್ ಅಧಿಕಾರಿ​ ಫ್ಯಾಮಿಲಿ ಸೇರಿ ಐವರು ಸಾವನ್ನಪ್ಪಿದ್ದಾರೆ.

    24 ವಾಹನಗಳು ಜಖಂ: ದಟ್ಟ ಮಂಜು ಆವರಣದಿಂದಾಗಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಸುಮಾರು 24ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದಾವೆ. ಈ ಸರಣಿ ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ನಂತರ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದವು. ನಂತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಟ್ರಾಫಿಕ್ ಜಾಮ್ ತೆರವುಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಕ್ರೇನ್‌ಗಳ ಮೂಲಕ ಜಖಂಗೊಂಡ ವಾಹನಗಳನ್ನು ತೆರವುಗೊಳಿಸಲಾಯಿತು. ದೀಪಾವಳಿಯ ನಂತರದ ರಾತ್ರಿ ರಾಷ್ಟ್ರೀಯ ರಾಜಧಾನಿ ದೆಹಲಿಯ ಹಲವಾರು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಅನೇಕ ಪ್ರದೇಶಗಳಲ್ಲಿ AQI 450 ಕ್ಕಿಂತ ಹೆಚ್ಚು ದಾಖಲಾಗಿತ್ತು.

    ನಿವೃತ್ತ ಪೊಲೀಸ್​ ಅಧಿಕಾರಿ ಫ್ಯಾಮಿಲಿ ಸಾವು: ಶುಕ್ರವಾರ ಬೆಳಗ್ಗೆ 4 ಗಂಟೆ ಸುಮಾರು ಮಥುರಾದ ನೌಜೀಲ್ ಪ್ರದೇಶದ 71 ನೇ ಮೈಲಿಗಲ್ಲು ಬಳಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿಯ ಪತ್ನಿ, ಮಗ ಹಾಗೂ ಆಗ್ರಾ-ನೋಯ್ಡಾ ಬಸ್‌ನ ಚಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಶಿರೀಶ್ ಚಂದ್ರ ತಿಳಿಸಿದ್ದಾರೆ.ಮುಂಜಾನೆ 4 ಗಂಟೆಗೆ ನೋಯ್ಡಾಗೆ ತೆರಳುತ್ತಿದ್ದ ಖಾಲಿ ಖಾಸಗಿ ಬಸ್‌ನ ಚಾಲಕ ನಿದ್ರಾಹೀನತೆಯಿಂದ ವಾಹನವನ್ನು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರಣ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದವರ ಐವರು ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮೊದಲು ಮಥುರಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಆಗ್ರಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

    ಮೃತರನ್ನು ಗಾಜಿಯಾಬಾದ್ ಮೂಲದ ಉತ್ತರಪ್ರದೇಶದ ನಿವೃತ್ತ ಪೊಲೀಸ್​ ಅಧಿಕಾರಿ ವೇದ್​ ಪ್ರಕಾಶ್​ ಯಾದವ್​ ಮಗ ಶಿವ ಸಾಗರ್ ಯಾದವ್ (27), ಅವರ ತಾಯಿ ಪ್ರೇಮಲಾಲಾ (55), ಸೋದರ ಸಂಬಂಧಿ ಗೌರವ್ (29) ಮತ್ತು ಕಿರಿಯ ಸಹೋದರ ಮೋಹಿನೇಶ್ ಅವರ ಸ್ನೇಹಿತ ಆರ್ಯನ್ ಚೌಧರಿ (22) ಮತ್ತು ಬಸ್ ಚಾಲಕ ಬಲ್ವಂತ್ ಸಿಂಗ್ ಎಂದು ಗುರುತಿಸಲಾಗಿದೆ. ಪಂಜಾಬ್‌ನ ಪಠಾಣ್‌ಕೋಟ್‌ ನಿವಾಸಿ ಮೋಹಿನೇಶ್ ಆಗ್ರಾದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಶಿರೀಶ್ ಚಂದ್ರ ತಿಳಿಸಿದ್ದಾರೆ.

    Latest Posts

    ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

    ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

    ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

    ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

    ಸಾರ್ವಜನಿಕ ಬಸ್ಸು ತಂಗುದಾಣವನ್ನು ಅಡುಗೆ ಮನೆ ಮಾಡಿದ ಕೂಲಿ ಕಾರ್ಮಿಕರು……! ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

    ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿ ದೇವಸ್ಥಾನದ ಎದುರುಗಡೆ ಇರುವ ಬಸ್ ತಂಗುದಾಣದಲ್ಲಿ ಕೆಲ ದಿನಗಳಿಂದ ಯಾವುದೊ ಕೂಲಿ ಕಾರ್ಮಿಕರು ಮನೆಯಂತೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಅಡುಗೆ ಮಾಡಿ ವಾಸಿಸುತ್ತಿದ್ದಾರೆ.

    ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಅಗ್ನಿ ಅವಗಢ; ಅಗ್ನಿಶಾಮಕ ದಳ ಆಗಮನ

    ಬೆಂಗಳೂರು: ನಗರದ ಕೆ.ಆರ್.‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಕೊರಿಯರ್‌ ಗೋಡೌನ್‌ನಿಂದ ದಟ್ಟ ಹೊಗೆ ಹರಡಿದೆ. ಕೆ.ಆರ್‌. ಮಾರುಕಟ್ಟೆಯ ಗೋಡೌನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ....

    Don't Miss

    ರಷ್ಯಾದಲ್ಲಿ ಕಲ್ಲಿದ್ದಲು ಗಣಿ ದುರಂತ: 52 ಮಂದಿ ದಾರುಣ ಸಾವು

    ಮಾಸ್ಕೊ: ರಷ್ಯಾದ ಕೆಮೆರೊವೊ ಎಂಬಲ್ಲಿ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತದಲ್ಲಿ 52 ಗಣಿಕಾರ್ಮಿಕರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈ ಐದು ವರ್ಷಗಳಲ್ಲಿ ನಡೆದ ಅತಿ ದೊಡ್ಡ ಗಣಿ...

    SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

    ಬೆಂಗಳೂರು (ನ. 26): ಎಸ್‌ಎಸ್‌ಎಲ್‌ಸಿ (SSLC Students ) ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ಶೇ. 20 ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.  ಕೊರೋನಾದಿಂದ ಪ್ರಸಕ್ತ...

    BIG BREAKING: ದಕ್ಷಿಣ ಕನ್ನಡ ಸರಕಾರಿ ವೈದ್ಯನ ರಾಸಲೀಲೆ; ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗಳ ಜೊತೆ ರಂಗಿನಾಟ!

    ಮಂಗಳೂರು: ಗುತ್ತಿಗೆ ಆಧಾರದಲ್ಲಿರುವ ಯುವತಿಯರ ಜೊತೆ ಸರಸ ಸಲ್ಲಾಪವಾಡುತ್ತಿದ್ದ ಮಂಗಳೂರಿನ ಪ್ರತಿಷ್ಠಿತ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಅವರ ಕಾಮಪುರಾಣ ಬಯಲಾಗಿದೆ. ಈ ದೃಶ್ಯಗಳು ಸಾಮಾಜಿಕ...

    ಮಂಗಳೂರು: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗಳು 4 ದಿನ ಪೊಲೀಸ್ ಕಸ್ಟಡಿಗೆ

    ಮಂಗಳೂರು: ವಾಮಂಜೂರು ಉಳಾಯಿಬೆಟ್ಟು ಪರಾರಿಯ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ...

    ಮಂಗಳೂರು: ಇಂದಿನಿಂದ ‘ಬೃಹತ್ ಕೋವಿಡ್ ವಾಕ್ಸಿನ್ ಮೇಳ’ ಆರಂಭ

    ಮಂಗಳೂರು: ನಗರದಲ್ಲಿ ಕೊವೀಡ್ ರೋಗ ನಿರೋಧಕ ಲಸಿಕೆ ಪ್ರಗತಿ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯಲ್ಲಿ ಬೃಹತ್ ಕೋವಿಡ್ ಲಸಿಕಾ ಶಿಬಿರ ಆರಂಭವಾಗಲಿದೆ.