Sunday, October 2, 2022

ಕೇರಳದ ರೈಲು ಅಪಘಾತದಲ್ಲಿ ವಿಟ್ಲದ ಯುವಕ‌ ಮೃತ್ಯು

ವಿಟ್ಲ: ಬಂಟ್ವಾಳದ ವಿಟ್ಲ ಸಮೀಪದ ಕಡಂಬುವಿನ ಯುವಕ ಕೇರಳದಲ್ಲಿ ನಡೆದ ರೈಲು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಕಡಂಬು ಸಮೀಪದ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ (19) ಮೃತಪಟ್ಟ...
More

    Latest Posts

    ಕಾಪು: ಕಡಲ ತೀರದಲ್ಲಿ ಭಾರೀ ಗಾತ್ರದ “ತೊರಕೆ”ಮೀನುಗಳ ಸುಗ್ಗಿ !

    ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿದ್ದು ಮತ್ಸ್ಯ ಪ್ರಿಯರ ಸಂಭ್ರಮಕ್ಕೆ ಕಾರಣವಾಗಿದೆ. ಮೀನುಗಾರರ ಬಲೆಗೆ ದೊಡ್ಡ ದೊಡ್ಡ...

    ಕುಂಬಳೆ: ಅ.10 ರಂದು ಅನಂತಪುರದಲ್ಲಿ “ಪುವೆಂಪು ನೆಂಪು” ತುಳು ಲಿಪಿ ದಿನಾಚರಣೆ

    ಕುಂಬಳೆ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಮೊದಲ ಅಧ್ಯಕ್ಷರು, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟು ಹಬ್ಬದ ಪ್ರಯುಕ್ತ "ಪುವೆಂಪು - ನೆಂಪು"...

    ಗಾಂಜಾ ಸೇವನೆ: 35 ಮಣಿಪಾಲ ವಿದ್ಯಾರ್ಥಿಗಳು ವಶಕ್ಕೆ

    ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲದ 35 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮಣಿಪಾಲ ಪೊಲೀಸರು ಮಣಿಪಾಲ ಎಂಐಟಿ ವಿದ್ಯಾರ್ಥಿಗಳಾದ ಯಶ್...

    ಮಂಗಳೂರು: ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ

    ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕಿರಣ್‌ ಕುಮಾರ್‌ ಕೋಡಿಕಲ್‌ ಇವರ ನೇತೃತ್ವದಲ್ಲಿ ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ ಕಾರ್ಯಕ್ರಮ ಇಂದು ನಡೆಯಿತು.

    ದೇಶದ ‘ಮಧ್ಯಮ ವರ್ಗ ಕುಟುಂಬ’ಗಳಿಗೆ ಸಿಹಿ ಸುದ್ದಿ ಕೊಟ್ಟ ‘ಕೇಂದ್ರ ಸರ್ಕಾರ’ ; ಈಗ ‘5 ಲಕ್ಷ’ದವರೆಗೆ ‘ಉಚಿತ ಚಿಕಿತ್ಸೆ’ ಲಭ್ಯ

    ನವದೆಹಲಿ : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ವಿಸ್ತರಣೆಯನ್ನ ಪರಿಗಣಿಸುತ್ತಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಹೊಸ ಫಲಾನುಭವಿಗಳಿಗೆ ನಾಮಮಾತ್ರದ ಪ್ರೀಮಿಯಂನಲ್ಲಿ ನೀಡಲು ಯೋಜಿಸುತ್ತಿದೆ ಎಂದರು.

    ಅಂದ್ಹಾಗೆ, ಈ ಯೋಜನೆಯನ್ನ 2018ರಲ್ಲಿ ಪ್ರಧಾನಿ ಮೋದಿ ಅವ್ರು ಪ್ರಾರಂಭಿಸಿದರು. ಇದರ ಅಡಿಯಲ್ಲಿ, 10.74 ಕೋಟಿ ಕುಟುಂಬಗಳು 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿವೆ.

    ಈ ಮೂಲಕ, ಅಗತ್ಯವಿರುವ ಎಲ್ಲರಿಗೂ ನಾವು ಪ್ರಯೋಜನವನ್ನ ನೀಡಲು ಸಾಧ್ಯವಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು. ಇದನ್ನು ಸಾಧಾರಣ ಪ್ರೀಮಿಯಂನಲ್ಲಿ ಜನರಿಗೆ ತಲುಪಿಸಲು ಸಿದ್ಧತೆಗಳನ್ನ ಮಾಡಲಾಗುತ್ತಿದೆ. ‘ಶ್ರೀಮಂತ ಅಥವಾ ಬಡವರಲ್ಲದ ದೇಶದ ಮಧ್ಯಮ ಆದಾಯದ ವಿಭಾಗವನ್ನು ನೋಡಿಕೊಳ್ಳುವ ಅಗತ್ಯವಿದೆ. ಅವರನ್ನ ಆರೋಗ್ಯ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಪರಿಗಣಿಸಲಾಗುತ್ತಿದೆ’ ಎಂದರು.

    ಈ ಯೋಜನೆಯು ಪ್ರಸ್ತುತ ಬಡವರು ಮತ್ತು ದುರ್ಬಲ ವರ್ಗಗಳ ಜನರನ್ನ ಒಳಗೊಂಡಿದೆ. ಆರೋಗ್ಯ ವಿಮೆಯ ಪ್ರೀಮಿಯಂ ಪ್ರಸ್ತುತ ಸುಮಾರು 1200 ರಿಂದ 1300 ರೂ.ಗಳವರೆಗೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ರ ಅನುಪಾತದಲ್ಲಿ ವೆಚ್ಚವನ್ನ ಭರಿಸುತ್ತವೆ.

    ‘ದೇಶದಲ್ಲಿ ವರ್ಷಕ್ಕೆ 1,00,000 ರೂ.ಗಳನ್ನು ಸಂಪಾದಿಸುವ ಜನರಿದ್ದಾರೆ. ವಾರ್ಷಿಕವಾಗಿ 10,00,000 ರೂ.ಗಳನ್ನ ಗಳಿಸುವ ಜನರೂ ಇದ್ದಾರೆ. ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಎರಡನೆಯವನು ಹೆಚ್ಚು ಸಂಪಾದಿಸಬಹುದು. ಆದ್ರೆ, ಆತ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸಾಧ್ಯವಾಗದಿರಬಹುದು. ಆದ್ದರಿಂದ ನಾವು ಫಲಾನುಭವಿಗಳ ಪಟ್ಟಿಯನ್ನು ವಿಸ್ತರಿಸಬೇಕಾಗಿದೆ. ಈ ಯೋಜನೆ ಗಂಭೀರ ಪರಿಗಣನೆಯಲ್ಲಿದೆ ‘ ಎಂದರು.

    ಪ್ರಸ್ತುತ, ದೇಶಾದ್ಯಂತ ಸುಮಾರು 28,000 ಆಸ್ಪತ್ರೆಗಳು ಕೇಂದ್ರದ ಯೋಜನೆಯ ಭಾಗವಾಗಿವೆ. ತನ್ನ ವಿಸ್ತರಣಾ ಯೋಜನೆಗಳ ಭಾಗವಾಗಿ, ನಗದುರಹಿತ ಚಿಕಿತ್ಸೆಯನ್ನ ಒದಗಿಸಲು ಸರ್ಕಾರವು ಈಗಾಗಲೇ ಹೆಚ್ಚು ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳನ್ನು ಎಂಪ್ಯಾನೆಲ್ ಮಾಡಲು ಪ್ರಾರಂಭಿಸಿದೆ ಎಂದು ಅಧಿಕಾರಿ ಹೇಳಿದರು.

    ಪಿಜಿಐ-ಚಂಡೀಗಢದ ಮಾಜಿ ನಿರ್ದೇಶಕ ಡಾ.ಕೆ.ಕೆ.ತಲ್ವಾರ್ ಮಾತನಾಡಿ, ‘ಜನಸಂಖ್ಯೆಯ ದೊಡ್ಡ ವಿಭಾಗವು ಆಯುಷ್ಮಾನ್ ಭಾರತ್ ಯೋಜನೆಯಡಿ ಬರುವುದಿಲ್ಲ. ಖಾಸಗಿ ವಿಮೆಯನ್ನ ಖರೀದಿಸುವುದು ಆತನಿಗೆ ಸುಲಭವಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಅವರಿಗಾಗಿ ಒಂದು ಯೋಜನೆಯನ್ನು ತರಲು ಯೋಚಿಸುತ್ತಿದ್ದರೆ, ಅದು ಉತ್ತಮ ಹೆಜ್ಜೆಯಾಗಿದೆ’ ಎಂದರು.

    Latest Posts

    ಕಾಪು: ಕಡಲ ತೀರದಲ್ಲಿ ಭಾರೀ ಗಾತ್ರದ “ತೊರಕೆ”ಮೀನುಗಳ ಸುಗ್ಗಿ !

    ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿದ್ದು ಮತ್ಸ್ಯ ಪ್ರಿಯರ ಸಂಭ್ರಮಕ್ಕೆ ಕಾರಣವಾಗಿದೆ. ಮೀನುಗಾರರ ಬಲೆಗೆ ದೊಡ್ಡ ದೊಡ್ಡ...

    ಕುಂಬಳೆ: ಅ.10 ರಂದು ಅನಂತಪುರದಲ್ಲಿ “ಪುವೆಂಪು ನೆಂಪು” ತುಳು ಲಿಪಿ ದಿನಾಚರಣೆ

    ಕುಂಬಳೆ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಮೊದಲ ಅಧ್ಯಕ್ಷರು, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟು ಹಬ್ಬದ ಪ್ರಯುಕ್ತ "ಪುವೆಂಪು - ನೆಂಪು"...

    ಗಾಂಜಾ ಸೇವನೆ: 35 ಮಣಿಪಾಲ ವಿದ್ಯಾರ್ಥಿಗಳು ವಶಕ್ಕೆ

    ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲದ 35 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮಣಿಪಾಲ ಪೊಲೀಸರು ಮಣಿಪಾಲ ಎಂಐಟಿ ವಿದ್ಯಾರ್ಥಿಗಳಾದ ಯಶ್...

    ಮಂಗಳೂರು: ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ

    ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕಿರಣ್‌ ಕುಮಾರ್‌ ಕೋಡಿಕಲ್‌ ಇವರ ನೇತೃತ್ವದಲ್ಲಿ ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ ಕಾರ್ಯಕ್ರಮ ಇಂದು ನಡೆಯಿತು.

    Don't Miss

    ದೇಶದಲ್ಲಿ 5 ವರ್ಷ `PFI’ ನಿಷೇಧ : ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

    ನವದೆಹಲಿ : ದೇಶಾದ್ಯಂತ ಎನ್ ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ರಾಜ್ಯದಲ್ಲಿ ಬೈಕ್ ಆ‍್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ಆರೋಗ್ಯ ಇಲಾಖೆ ಆದೇಶ

    ಬೆಂಗಳೂರು : ಕರ್ನಾಟಕದಲ್ಲಿ ಬೈಕ್ ಆ‍್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ. ರಾಜ್ಯದಲ್ಲಿ 108 ಆಯಂಬುಲೆನ್ಸ್ ಸೇವೆ ಹೆಚ್ಚಿರುವುದರಿಂದ ರಾಜ್ಯದಲ್ಲಿ ಬೈಕ್ ಆ‍್ಯಂಬುಲೆನ್ಸ್...

    ಮಳಲಿ ಮಸೀದಿ ವಿವಾದ: ಅ.17ಕ್ಕೆ ತೀರ್ಪು ಕಾಯ್ದಿರಿಸಿದ ಮಂಗಳೂರು ಸಿವಿಲ್‌ ಕೋರ್ಟ್‌

    ಮಂಗಳೂರು: ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದ ಹಿನ್ನೆಲೆ ಸ್ಥಳದಲ್ಲಿ ಸರ್ವೇ ಮಾಡಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ 3ನೇ ಹೆಚ್ಚುವರಿ...

    ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ -ಮೂವರು ಪೊಲೀಸ್ ವಶಕ್ಕೆ

    ಪುತ್ತೂರು: ಉಪ್ಪಿನಂಗಡಿಯ ಸರಕಾರಿ ಪಿಯು ಕಾಲೇಜಿನಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವಿನ ಮಾರಾಮಾರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸೆಪ್ಟಂಬರ್ 26ರ ಸೋಮವಾರ ಸಂಜೆ ಉಪ್ಪಿನಂಗಡಿಯ ಬಸ್...

    ಬೆಳ್ತಂಗಡಿ: ಅಪಘಾತ ತಪ್ಪಿಸಲು ಹೋಗಿ ಮನೆಗೆ ಡಿಕ್ಕಿ ಹೊಡೆದ ಲಾರಿ

    ಬೆಳ್ತಂಗಡಿ: ನಿಡಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಪ್ಪಿಸಲು ಹೋಗಿ ಲಾರಿಯೊಂದು ರಸ್ತೆ ಬದಿಯ ಮನೆಗೆ ಡಿಕ್ಕಿಹೊಡೆದ ಘಟನೆ ಮಂಗಳವಾರ ಸಂಭವಿಸಿದೆ. ಅತಿಯಾದ ವೇಗದಲ್ಲಿ ಬಂದ...