ಉಡುಪಿ : ಸ್ಕೂಟರ್ ಖರೀದಿ ನೆಪದಲ್ಲಿ ಆನ್‌ಲೈನ್ ಮೂಲಕ ವ್ಯಕ್ತಿಯೊಬ್ಬರು ಸಾವಿರಾರು ರೂ. ಕಳೆದುಕೊಂಡ ಘಟನೆ ನಡೆದಿದೆ. ರಾಜೇಶ್ ಅಮೀನ್ ಎಂಬವರು ಸ್ಕೂಟರ್ ಖರೀದಿಸುವ ಬಗ್ಗೆ ಆನ್ ಲೈನ್ ನಲ್ಲಿ ಅದರಲ್ಲಿ ಬಂದ ವೆಬ್‌ಸೈಟ್‌ನಲ್ಲಿ ಕಂಡು ಬಂದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದಾಗ ಆತ ಮುಂಗಡ ಹಣ ಪಾವತಿಸುವಂತೆ ಬ್ಯಾಂಕ್ ಖಾತೆ ಸಂಖ್ಯೆ ನೀಡಿದ್ದ. ಇದನ್ನು ನಂಬಿದ ಅವರು ಹಂತ-ಹಂತವಾಗಿ ಒಟ್ಟು 69,439 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಆತ ಪಡೆದ ಹಣವನ್ನು ಹಿಂದಿರುಗಿಸದೆ ಇತ್ತ ಸ್ಕೂಟರನ್ನೂ ನೀಡದೆ ವಂಚಿಸಿದ್ದಾನೆ.ಈ ಬಗ್ಗೆ ಸನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
©2021 Tulunada Surya | Developed by CuriousLabs