ಆಫ್ರಿಕಾ ರಾಷ್ಟ್ರಗಳಿಂದ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋಗೆ ಥ್ಯಾಲ್ಯಾಂಡ್ ಎಂದು ನಂಬಿಸಿ ಕೋಕೋ ಬೀನ್ಸ್ ಪೂರೈಸಿ 10. 70 ಕೋಟಿಗಳಷ್ಟು ವಂಚಿಸಿದ ದುಬೈ ಖಾಸಗಿ ಏಜೆನ್ಸಿಯ ಮುಖ್ಯಸ್ಥ ವಿನ್ಸಿ ಪಿಂಟೋ ಎಂಬಾತನನ್ನು ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಅಲ್ಲಿನ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಪುತ್ತೂರಿನ ಚಾಕಲೇಟ್ ಫ್ಯಾಕ್ಟರಿಗೆ ಕ್ಯಾಂಪ್ಕೋ 2019ರಲ್ಲಿ ದುಬೈನ ಎನ್ಸಿ ಪಿಂಟೋ ಏಜೆನ್ಸಿಯಿಂದ ಕೋಕೋ ಬೀನ್ಸ್ ಖರೀದಿಸಿತ್ತು. ಈ ಕೋಕೋ ಬೀನ್ ನ್ನು ಏಜೆನ್ಸಿಯು ಥ್ಯಾಲ್ಯಾಂಡ್ನಿಂದ ಆಮದು ಮಾಡಿದ್ದಾಗಿ ನಂಬಿಸಿತ್ತು. ವಾಸ್ತವದಲ್ಲಿ ಇದನ್ನು ದಕ್ಷಿಣ ಆಫ್ರಿಕಾದ ಕಾಂಗೋದಿಂದ ತರಿಸಿಕೊಂಡಿತ್ತು. ಏಷಿಯನ್ ರಾಷ್ಟ್ರಗಳ ನಡುವೆ ವ್ಯಾಪಾರ ಒಪ್ಪಂದ ಪ್ರಕಾರ ಥ್ಯಾಲ್ಯಾಂಡ್ ಮತ್ತು ಭಾರತ ನಡುವೆ ಮುಕ್ತ ಅವಕಾಶ ಇದೆ. ಇದನ್ನೇ ವ್ಯಾಪಾರಕ್ಕೆ ದುರುಪಯೋಗಪಡಿಸಿಕೊಂಡ ದುಬೈ ಏಜೆನ್ಸಿ ಆಫ್ರಿಕಾದ ಕೋಕೋ ಬೀಜಕ್ಕೆ ಥ್ಯಾಲ್ಯಾಂಡ್ ಲೇಬಲ್ ಹೆಚ್ಚಿ ಕ್ಯಾಂಪ್ಕೊಗೆ ಮಾರಾಟ ಮಾಡಿತ್ತು. ಕೇಂದ್ರ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪುತ್ತೂರಿನ ಕ್ಯಾಂಪ್ಕೋ ಕೋಕೋ ಗೋದಾಮು ಮೇಲೆ ದಾಳಿ ನಡೆಸಿ ಕೋಕೋ ಬೀನ್ ಮಾಲನ್ನು ಪರಿಶೀಲಿಸಿದ್ದರು.
©2021 Tulunada Surya | Developed by CuriousLabs