ಕೋಟೆಕಾರು ಪಟ್ಟಣ ಪಂಚಾಯತ್ ಕಟ್ಟಡದಲ್ಲಿ 74 ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕೋಟೆಕಾರು ಪಟ್ಟಣ ಪಂಚಾಯತ್‌ನ ಕೌನ್ಸಿಲರ್ ರಾಘವ ಗಟ್ಟಿಯವರು ಧ್ವಜಾರೋಹಣಗೈದರು.ಬಳಿಕ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

ಭಾರತ ದೇಶದ ಒಳಿತಿಗಾಗಿ ಹಾಗೂ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಸಹಕಾರ ಮಾಡಬೇಕೆಂದು ಹಾಗೂ ಸ್ವಚ್ಛ ಭಾರತ ಪರಿಕಲ್ಪನೆಯನ್ನು ನಾವೇಲ್ಲರೂ ಕೂಡ ಅಳವಡಿಸಬೇಕೆಂದು ಕರೆ ನೀಡಿದರು. ಅದೇ ರೀತಿ ಇನ್ನೊಬ್ಬರಿಗೆ ಸೇವೆ ಸಹಕಾರ ಮಾಡುವ ಮೂಲಕ ನಮ್ಮ ಜೀವನವನ್ನು ಸಾರ್ಥಕಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಕಟ್ಟಡದ ಅಂಗಡಿಗಳ ಮಾಲಕರುಗಳಾದ ಶ್ರೀನಿವಾಸ್ ಶೆಟ್ಟಿ, ದಯಾನಂದ ಶೆಟ್ಟಿ,ಸೀತಾರಾಮ್, ದಾಮೋದರ್, ಲಾಯ್,ಶ್ರೀಮತಿ ಸ್ವಸ್ತಿಕ, ಜಾಕೀರ್ ದೇವದಾಸ್ ಕೋಟೆಕಾರ್,ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
