ಮಂಡ್ಯ : ಗ್ರಾಮದ ಕೆರೆಗೆ ಕಿಡಿಗೇಡಿಗಳು ವಿಷ ಹಾಕಿದ ಪರಿಣಾಮ ನೂರಾರು ಮೀನುಗಳ ಮಾರಣ ಹೋಮ ನಡೆದಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ನಡೆದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ನಾಗಮಂಗಲ ತಾಲೂಕಿನ ಮಾರದೇವರಹಳ್ಳಿ ಗ್ರಾಮದಲ್ಲಿರುವ ಮಾರದೇವನ ಕೆರೆಗೆ ತಡರಾತ್ರಿ ಕಿಡಿಗೇಡಿಗಳು ವಿಷಪ್ರಾಶನ ಮಾಡಿದ್ದಾರೆ. ಇದ್ರಿಂದಾಗಿ ಈ ಕೆರೆಯಲ್ಲಿದ್ದ ನೂರಾರು ಮೀನುಗಳು ಸತ್ತು ತೇಲುತ್ತಿವೆ. ಕೆರೆಯಲ್ಲಿ ಈ ಸತ್ತ ಮೀನುಗಳು ಇಷ್ಟೊಂದು ಪ್ರಮಾಣದಲ್ಲಿ ತೇಲುತ್ತಿರುವುದನ್ನು ನೋಡಿ ಊರಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅಲ್ಲದೆ, ಈ ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೆಗೆ ಕಿಡಿಗೇಡಿಗಳು ವಿಷಪ್ರಾಷನ ಮಾಡಿರುವುದಕ್ಕೆ ಗ್ರಾಮಸ್ಥರು ಹಳೆಯ ದ್ವೇಷಕ್ಕೆ ಕಿಡಿಗೇಡಿಗಳು ಈ ಕೃತ್ಯ ಎಸಗಿರಬೇಕೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದ ಕೆರೆಯಲ್ಲಿದ್ದ ಚಿಕ್ಕಪುಟ್ಟ ಬಹುತೇಕ ಮೀನುಗಳು ಸೇರಿದಂತೆ 5 ರಿಂದ 7 ಕೆ.ಜಿ ತೂಕವಿದ್ದ ಮೀನುಗಳು ಕೂಡ ಸಾವನ್ನಪ್ಪಿದ್ದು, ಕೆರೆಯಲ್ಲಿ ತೇಲುತ್ತಿದೆ.
ಅಲ್ಲದೆ, ಕೆರೆ ನೀರು ಕೂಡ ದುರ್ಗಂಧ ಬೀರುತ್ತಿರೋದರ ಜೊತೆ ವಿಷಪ್ರಾಶನ ಮಾಡಿರುವ ಕಾರಣದಿಂದ ಜಾನುವಾರಗಳಿಗೂ ನೀರು ಕುಡಿಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಅಲ್ದೆ ವಿಷಪ್ರಾಶನವಾಗಿರೋ ಈ ಮೃತ ಮೀನುಗಳನ್ನ ಪಕ್ಷಿಗಳು ತಿನ್ನುವುದರಿಂದ ಅವುಗಳು ಸಹ ಸಾವನ್ನಪ್ಪಬಹುದೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ತಮ್ಮೂರಿನ ಕೆರೆ ವಿಷಪ್ರಾಶನ ಮಾಡಿ ಮೀನುಗಳ ಮಾರಣಹೋಮ ನಡೆಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಗ್ರಾಮದಲ್ಲಿರುವ ಕೆರೆಗೆ ಕಿಡಿಗೇಡಿಗಳು ವಿಷ ಹಾಕಿದ್ದರಿಂದ ನೂರಾರು ಮೀನುಗಳು ಕೆರೆಯಲ್ಲಿ ಸತ್ತು ತೇಲುತ್ತಿವೆ. ಕಿಡಿಗೇಡಿಗಳ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
