ಬಂಟ್ವಾಳ: ಸಾಲದ ಕಂತು ಕಟ್ಟು ಎಂದಿದ್ದಕ್ಕೆ ವ್ಯಕ್ತಿಯೋರ್ವ ಬೈಕಿಗೆ ಬೆಂಕಿ ಇಟ್ಟ ಘಟನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ.
ಫರಂಗಿಪೇಟೆ ನಿವಾಸಿ ಮಹಮ್ಮದ್ ಹರ್ಷಾದ್ ಬೈಕ್ ಮೇಲೆ ಸಾಲ ಪಡೆದಿದ್ದ. ಸಾಲದ ಹಣ ವಾಪಸ್ ನೀಡುವಂತೆ ಫೈನಾನ್ಸ್ ಕಂಪನಿಯು ಕೇಳಿತ್ತು. ಇದರಿಂದ ಕೆರಳಿದ ಮಹಮ್ಮದ್ ಶೋ ರೂಂ ಎದುರಲ್ಲಿ ಬೈಕ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬಂಟ್ವಾಳ ಅಗ್ನಿಶಾಮಕ ದಳದವರು ಸಕಾಲದಲ್ಲಿ ಆಗಮಿಸಿ ಶೋ ರೂಂನಲ್ಲಿ ನಿಲ್ಲಿಸಲಾಗಿದ್ದ ಉಳಿದ ಬೈಕ್ಗಳಿಗೆ ಬೆಂಕಿ ಪಸರಿಸದಂತೆ ನೀರು ಹಾಯಿಸಿ ನಂದಿಸಿದರು. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೋಲೀಸ್ ಇನ್ಸ್ಪೆಕ್ಟರ್ ವಿವೇಕಾನಂದ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.