ಮಂಗಳೂರು: ದಿನಸಿ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಮಣ್ಣಗುಡ್ಡದಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಮಣ್ಣಗುಡ್ಡದ ಮಠದ ಕಣಿ ಮಿಶನ್ ಗೋರಿ ರಸ್ತೆಯಲ್ಲಿರುವ ಸಂದೀಪ್ ಎಂಬವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.
ಮುಂಜಾನೆ 5.30ರ ಸುಮಾರಿಗೆ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಸುಮಾರು ಎರಡು ಲಕ್ಷ ರೂ ನಷ್ಟವಾಗಿದೆ ಎಂದು ಪ್ರಾಥಮಿಕ ಅಂದಾಜಿಸಲಾಗಿದೆ. ಈ ಅಂಗಡಿ ಬಳಿ ಇತರ ಅಂಗಡಿಗಳಿವೆ. ಆದರೆ ಅಗ್ನಿಶಾಮಕ ದಳದವರು ಸಕಾಲದಲ್ಲಿ ಬಂದು ಬೆಂಕಿ ನಂದಿಸಿದ ಕಾರಣ ಇತರ ಅಂಗಡಿಗಳು ಬೆಂಕಿಯಿಂದ ಪಾರಾಗಿವೆ.