ಬಂಟ್ವಾಳ: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಕಳ್ಳಿಗೆ ಗ್ರಾಮ ದೇವಂದಬೆಟ್ಟು ಎಂಬಲ್ಲಿ ಡಿ.16ರಂದು ರಾತ್ರಿ ನಡೆದಿದೆ.
ದೇವಂದಬೆಟ್ಟು ಸುಂದರಿ, ಶುಭ ಆನಂದ ಬಂಜನ್ ಎಂಬವರಿಗೆ ಸೇರಿರುವ ಹಂಚಿನ ಹಳೆಯ ಮನೆಗೆ ರಾತ್ರಿ ಸುಮಾರು 10:15ಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿದ್ದು ಎನ್ನಲಾಗಿದ್ದು, ಸುಮಾರು 6 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಬಹುದು ಎಂದು ಅಂದಾಜಿಲಾಗಿದೆ.
ಹಳೆಯ ಶೈಲಿಯ ಮನೆಗೆ ಬೆಂಕಿ ತಗುಲಿದ್ದು ಸ್ಥಳಕ್ಕೆ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.