ಮೂಡುಬಿದಿರೆ : ತಾಲೂಕಿನ ಇರುವೈಲು ಗ್ರಾ.ಪಂ ವ್ಯಾಪ್ತಿಯ ಹೊಸಮರಾಯ ಪದವಿನಲ್ಲಿ ಕೊರಗಪ್ಪ ಶೆಟ್ಟಿ ಎಂಬವರ ರಬ್ಬರ್ ತೋಟಕ್ಕೆ ಶುಕ್ರವಾರ ಸಂಜೆ ಬೆಂಕಿ ಬಿದ್ದಿದ್ದು ಸುಮಾರು 7-8 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ಆ ಪ್ರದೇಶಕ್ಕೆ ಅಗ್ನಿಶಾಮಕ ವಾಹನ ಹೋಗಲು ಸರಿಯಾದ ದಾರಿ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ ಆದರೂ ಅಗ್ನಿಶಾಮಕ ದಳದ ಠಾಣಾಧಿಕಾರಿ ಅವರ ನೇತೃತ್ವದಲ್ಲಿ ಸಿಬಂಧಿಗಳು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ.
ಗ್ರಾಮಸ್ಥರು ಟ್ಯಾಂಕರ್, ಟಿಪ್ಪರ್ ಮೂಲಕ ನೀರನ್ನು ಹಾಕುತ್ತಿದ್ದಾರೆ ಆದರೂ ಬೆಂಕಿ ಕಂಟ್ರೋಲ್ ಗೆ ಬಾರದೆ ಇನ್ನೂ ಹೆಚ್ಚಿನ ಜಾಗಕ್ಕೆ ಆವರಿಸಿಕೊಳ್ಳುತ್ತಿದೆ.
ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕ ಸುದೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
©2021 Tulunada Surya | Developed by CuriousLabs