Home ದೇಶ-ವಿದೇಶ ದೆಹಲಿ ಹೂವಿನ ಮಾರುಕಟ್ಟೆಯಲ್ಲಿ ಬಾಂಬ್​ ಪತ್ತೆ- ತಪ್ಪಿದ ಭಾರಿ ದುರಂತ

ದೆಹಲಿ ಹೂವಿನ ಮಾರುಕಟ್ಟೆಯಲ್ಲಿ ಬಾಂಬ್​ ಪತ್ತೆ- ತಪ್ಪಿದ ಭಾರಿ ದುರಂತ

0
28

ನವದೆಹಲಿ: ಪೂರ್ವ ದೆಹಲಿಯ ಘಾಜಿಪುರದಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕಗಳು ಪತ್ತೆಯಾಗಿ ಸಾಕಷ್ಟು ಆತಂಕ ಸೃಷ್ಟಿಸಿದ್ದು, ಪೊಲೀಸರ ತಂಡವು ಯಶಸ್ವಿಯಾಗಿ ಅದನ್ನು ನಿಷ್ಕ್ರಿಯಗೊಳಿಸಿದೆ.

ಅನುಮಾನಾಸ್ಪದ ಚೀಲವೊಂದು ಹೂವಿನ ಮಾರುಕಟ್ಟೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ ಎನ್​ಎಸ್​ಜಿ ತಂಡ ಸ್ಫೋಟಕವಿದ್ದ ಬ್ಯಾಗ್​ನ್ನು ವಶಪಡಿಸಿಕೊಂಡು ಬಾಂಬ್​ನ್ನು ನಗರದ ಹೊರವಲಯದಲ್ಲಿ ನಿಷ್ಕ್ರಿಯಗೊಳಿಸಿದ್ದಾರೆ. ಇನ್ನು ಸ್ಥಳದಲ್ಲಿ ಬಾಂಬ್​ ಇಟ್ಟ ಆರೋಪಿಗಳಿಗಾಗಿ ಪೊಲೀರು ಶೋಧ ಮುಂದುವರೆಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here