ವಿಟ್ಲ:ಖಾಸಗಿ ಬಸ್ ಚಾಲಕರ ನಡುವೆ ಹೊಡೆದಾಟ ವಿಟ್ಲ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮಣಿಕಂಠ ಮತ್ತು ಮಹೇಶ್ ಬಸ್ ಚಾಲಕರಿಬ್ಬರು ಬಸ್ ನಿಲ್ಧಾಣದಲ್ಲಿ ರಂಪಾಟ ಮಾಡಿರುವ ಬಗ್ಗೆ ವರದಿಯಾಗಿದೆ. ಮಹೇಶ್ ಬಸ್ ಚಾಲಕ ಮಣಿಕಂಠ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಬಸ್ ಟೈಮಿಂಗ್ಸ್ ವಿಚಾರಕ್ಕೆ ಜಗಳ ನಡೆದು ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚಗೆ ವಿಟ್ಲ ಬಸ್ ಸ್ಟ್ಯಾಂಡ್ ನಲ್ಲಿ ಟೈಮಿಂಗ್ಸ್ ವಿಚಾರಕ್ಕೆ ಇಬ್ಬರು ಸಿಬ್ಬಂದಿಗಳು ಜಗಳವಾಡಿದ್ದರು. ಇದಾದ ಬೆನ್ನಲ್ಲೆ ಮತ್ತೆ ಇಂತದ್ದೇ ಘಟನೆ ನಡೆದಿದೆ.
