ಬೆಳ್ತಂಗಡಿ:ಯುವತಿಯೋರ್ವಳು ಜ್ವರದಿಂದ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ತೆಂಕಕಾರಂದೂರು ಗ್ರಾಮದ ಸಿಂಗ ಎಂಬವರ ಪುತ್ರಿ ಪವಿತ್ರ (22) ಮೃತ ಯುವತಿ.
ಜ್ವರದಿಂದ ಬಳಲುತ್ತಿದ್ದ ಪವಿತ್ರಾಳನ್ನು ಗುರುವಾಯನಕೆರೆ ಆಸ್ಪತ್ರೆಗೆ ಮೊದಲು ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಇದ್ದಾಗ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.