ನವದೆಹಲಿ: ಬೀದಿ ನಾಯಿಗಳಿಗೆ ಆಹಾರ ನೀಡುವವರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಮಾರ್ಪಡು ಮಾಡಿದೆ.
ಬೀದಿ ನಾಯಿಗಳಿಗೆ ಆಹಾರ ನೀಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ಆಹಾರ ನೀಡುವ ಮೂಲಕ ತೊಂದರೆ ಉಂಟುಮಾಡುವ ಯಾರ ವಿರುದ್ಧ ಬೇಕಾದರೂ ಕ್ರಮ ಕೈಗೊಳ್ಳಲು ಪುರಸಭೆಗೆ ಸ್ವಾತಂತ್ರ್ಯ ಇದೆ. ಆದರೆ ಆಹಾರ ನೀಡುವವರ ವಿರುದ್ಧ ದಂಡದಂತಹ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು” ಎಂದು ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಹೇಳಿದೆಈ ಮೂಲಕ, ಬೀದಿನಾಯಿಗಳಿಗೆ ಆಹಾರ ನೀಡುವಂತೆ ಒತ್ತಾಯಿಸುವವರು ಅವುಗಳನ್ನು ದತ್ತುಪಡೆಯಬೇಕು ಎಂದು ಹೈಕೋರ್ಟ್ ನಾಗಪುರ ಪೀಠ ಮಾಡಿದ್ದ ಅವಲೋಕನಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ”ಮನುಷ್ಯರು ಇರುವಲ್ಲೆಲ್ಲಾ ಹಿತಾಸಕ್ತಿ ಸಂಘರ್ಷ ಇರುತ್ತದೆ. ಬೀದಿನಾಯಿಗಳಿಂದಲೂ ತಪ್ಪಾಗುತ್ತದೆ, ನಾವು ಎರಡರ ಬಗ್ಗೆಯೂ ಜಾಗೃತರಾಗಿರಬೇಕು, ಬೇರೆ ವಿಚಾರಗಳು ಇರಬಹುದು. ಆಹಾರ ನೀಡುವ ಜನರಿಗೆ ನೀವು ಅವುಗಳನ್ನು ದತ್ತು ಪಡೆದುಕೊಳ್ಳಿ ಎಂದು ಒತ್ತಾಯಿಸಲು ಸಾಧ್ಯವಿಲ್ಲ” ಎಂಬುದಾಗಿ ನ್ಯಾ. ಖನ್ನಾ ಅಭಿಪ್ರಾಯಪಟ್ಟಿದ್ದಾರೆಮಹಾರಾಷ್ಟ್ರದ ನಾಗಪುರದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವವರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್ ಸೂಚಿಸಿತ್ತು.
