Friday, April 19, 2024
spot_img
More

    Latest Posts

    ಬೆಂಗಳೂರಲ್ಲಿ ಮತ್ತೊಂದು ದುರಂತ: BBMP ನಿರ್ಲಕ್ಷ್ಯ, ಚರಂಡಿಗೆ ಬಿದ್ದು ಯುವತಿ ಸಾವು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿಯೊಬ್ಬಳು ಚರಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ. ರಸ್ತೆಯ ಮೇಲಿದ್ದ ಜಲ್ಲಿ ಕಲ್ಲುಗಳು ಹಾಗೂ ಬೀದಿ ದೀಪಗಳು ಇಲ್ಲದೇ ಇರೋದು ಈ ಸಾವಿಗೆ ಕಾರಣವಾಯ್ತಾ? ಎನ್ನುವ ಅನುಮಾನ ಮೂಡತೊಡಗಿದೆ.

    ಬೆಂಗಳೂರಿನಂತ ಮಹಾನಗರದಲ್ಲಿ ಆಕ್ಸಿಡೆಂಟ್ ಆಗೋದು ಕಾಮನ್. ಆದ್ರೆ ಯಾರದ್ದೊ ನಿರ್ಲಕ್ಷ್ಯಕ್ಕೆ ಅದೆಷ್ಟೊ ಜೀವಗಳು ಬಲಿಯಾಗೋದು ನಿಜಕ್ಕೂ ದುರಂತ. ನಿನ್ನೆ ರಾತ್ರಿ ಸಾರಾಯ್ ಪಾಳ್ಯದ ಬಿಡಿಎ ಲೇಔಟ್‌ನ ನೀರು ಕಾಲುವೆಗೆ ಬಿದ್ದು ನೇಪಾಳ ಮೂಲದ, 26 ವರ್ಷದ ಯುವತಿ ತಾರಾ ಬಡಾಯಿಕ್ ಮೃತಪಟ್ಟಿದ್ದಾಳೆ. ತನ್ನ ಡಿಯೊ ಸ್ಕೂಟರ್‌ನಲ್ಲಿ ಬಲ ತಿರುವು ಪಡೆಯಬೇಕಾದ್ರೆ ಗಾಡಿ ಸ್ಕಿಡ್ ಆಗಿ ರಸ್ತೆ ಪಕ್ಕದಲ್ಲಿದ್ದ ಡ್ರೈನೇಜ್‌ಗೆ ಬಿದ್ದಿದೆ. ಯುವತಿಯ ತೊಡೆಗೆ ಏಟು ಬಿದ್ದು ರಕ್ತಸ್ರಾವವಾಗಿ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಯುವತಿ ಸಾವನ್ನಪ್ಪಿದ್ದಾಳೆ.

    ಯುವತಿ ತಾರಾ ಸಾವನ್ನಪ್ಪಿದ ಸ್ಥಳದಲ್ಲಿ ಅಪಾರ್ಟ್ ಮೆಂಟ್ ಕನ್‌ಸ್ಟ್ರಕ್ಷನ್ ನಡೆಯುತ್ತಿದೆ. ಹೀಗಾಗಿ ರಸ್ತೆಯ ಮೇಲೆ ಸಣ್ಣ ಸಣ್ಣ ಜಲ್ಲಿಕಲ್ಲುಗಳು ಬಿದ್ದಿವೆ. ಸ್ಕೂಟರ್ ಸ್ಕಿಡ್ ಆಗಲು ಇದೂ ಕೂಡ ಕಾರಣ. ಅಲ್ಲದೆ ಬಿಬಿಎಂಪಿ ಲೈಟ್ ಕಂಬಗಳಿದ್ರು ಬೀದಿ ದೀಪಗಳ ಅಳವಡಿಕೆ ಕಾರ್ಯವಾಗಿಲ್ಲ. ರಸ್ತೆ ಕಾಣದೆ ಇದೂ ಕೂಡ ಘಟನೆಗೆ ಕಾರಣವಾಗಿರಬಹುದು. ಯುವತಿಯ ಜೊತೆ ಇದ್ದ ಹಿಂಬದಿ ಸವಾರ ದಿಲೀಪ್ ನೀಡಿದ ದೂರಿನ ಮೇಲೆ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಹಾಳಾಗಿವೆ. ಮನೆ ಕೆಲಸ ಮಾಡಿಕೊಂಡು ದೂರದ ನೇಪಾಳದಿಂದ ಬಂದು ಹೊಟ್ಟೆ ಹೊರೆಯುತ್ತಿದ್ದ ತಾರಾಳ‌ಸಾವು ನಿಜಕ್ಕೂ ಅನ್ಯಾಯ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss