ಬೆಂಗಳೂರು: ನಗರದಲ್ಲಿ ಮತ್ತೊಂದು ಘೋರ ದುರಂತವೊಂದು ಸಂಭವಿಸಿದೆ. ತಂದೆಯ ಜೊತೆಗೆ ಹೋಗಿದ್ದಂತ ಬಾಲಕನೊಬ್ಬ ಆಟವಾಡುತ್ತಾ, ಹೋಟೆಲ್ ತ್ಯಾಜ್ಯದ ಗುಂಡಿಗೆ ಬಿದ್ದು ಸಾವನ್ನಪ್ಪಿರೋ ಘಟನೆ ಹೂಡಿ ಬಳಿಯಲ್ಲಿ ನಡೆದಿದೆ.
ಬೆಂಗಳೂರಿನ ಮಹಾದೇವ ಪೊಲೀಸ್ ಠಾಣೆಯ ವ್ಯಾಪ್ತಿಯ ಹೂಡಿ ಬಳಿಯ ಗ್ರಾಫೈಡ್ ರೋಡ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ವ್ಯಕ್ತಿಯೊಬ್ಬರು ಕೆಲಸ ಮಾಡುತ್ತಿದ್ದರು. ಅವರೊಂದಿಗೆ 8 ವರ್ಷದ ಬಾಲಕ ಮನೀಶ್ ಕೂಡ ತೆರಳಿದ್ದರು. ತಂದೆ ಕೆಲಸದಲ್ಲಿ ನಿರತವಾಗಿದ್ದಂತ ಸಂದರ್ಭದಲ್ಲಿ, ಆಟವಾಡುತ್ತಾ ಹೋಟೆಲ್ ಒಂದರ ತ್ಯಾಜ್ಯದ ಗುಂಡಿಯ ಬಳಿಗೆ ತೆರಳಿದಂತ ಮನೀಶ್ (8) ಬಾಲಕ, ಗುಂಡಿಗೆ ಬಿದ್ದು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಮಹಾದೇವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.