ಕಾಸರಗೋಡು: ಅಬುಧಾಬಿಯಲ್ಲಿ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದು ಕೇರಳ ಕಾಸರಗೋಡು ಮೂಲದ ಯುವಕನೋರ್ವ ರವಿವಾರ ಮುಂಜಾನೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕಾಸರಗೋಡು ಜಿಲ್ಲೆಯ ಪಾಣತ್ತೂರು ಪನತ್ತಡಿಯ ಮುಹಮ್ಮದ್ ಶಮೀಮ್ (24) ಮೃತಪಟ್ಟವರು.
ಮೃತ ಮುಹಮ್ಮದ್ ಶಮೀಮ್ ಅಬುಧಾಬಿ ಸಿಟಿ ವಿಮಾನ ನಿಲ್ದಾಣ ಸಮೀಪದ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಜೆಯಲ್ಲಿ ಊರಿಗೆ ಬಂದು ವರ್ಷದ ಹಿಂದೆ ಮತ್ತೆ ಅಬುಧಾಬಿಗೆ ಮರಳಿದ್ದರು. ಮೃತ ದೇಹವನ್ನು ಊರಿಗೆ ತರುವ ಸಿದ್ಧತೆ ನಡೆಯುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.