ಮಂಗಳೂರು: ಕೋಮು ಸಂಘರ್ಷ ಮಾಡುವ ಹುನ್ನಾರದಿಂದ ಮೆಸೇಜ್ ಗಳನ್ನು ಮಾರಿ ಗುಡಿ ಎಂಬ ನಕಲಿ ಇನ್ ಸ್ಟಾ ಗ್ರಮ್ ಖಾತೆ ಮೂಲಕ ಪೋಸ್ಟ್ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳ್ತಂಗಡಿ ಯ ಮುಹಮ್ಮದ್ ಅಝಲ್( 20 ) ಎಂಬಾತನನ್ನು ಬಂಧಿಸಿ ನಾಯಾಲಯಕ್ಕೆ ಹಾಜರು ಪಡಿಸಲಾಗಿರುತ್ತದೆ.
ಮಾನ್ಯ ನ್ಯಾಯಾಲಯ ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.