Wednesday, April 17, 2024
spot_img
More

    Latest Posts

    ಯುವತಿಯ ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾದ ಫೇಸ್ಬುಕ್ ಗೆಳೆಯ; ಪ್ರಕರಣ ದಾಖಲು

    ಮೈಸೂರು : ಫೇಸ್ ಬುಕ್ ನಲ್ಲಿ ಪರಿಚಯವಿಲ್ಲದ ವ್ಯಕ್ತಿಯ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಮೈಸೂರಿನ ಯುವತಿಯೊಬ್ಬರು ತಮ್ಮ ಸ್ಕೂಟರ್ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಫೇಸ್ ಬುಕ್ ನಲ್ಲಿ ಪರಿಚಯವಾದ ಯುವಕ ಯುವತಿಯ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

    ನರಸಿಂಹ ರಾಜ ಮೊಹಲ್ಲಾದ 21 ವರ್ಷದ ಯುವತಿ ಸ್ಕೂಟಿ ಕಳೆದುಕೊಂಡಿದ್ದು ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆ ವಿವರ: ರೋಹಿತ್ ಸಿಜೂರ್ ಎಂಬ ಫೇಸ್ ಬುಕ್ ಅಕೌಂಟ್ ನಿಂದ ಡಿಸೆಂಬರ್ 19 ರಂದು ಯುವತಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಯುವತಿ ಈ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದಾರೆ. ಬಳಿಕ ಡಿಸೆಂಬರ್ 26 ರಂದು ಆಕೆಗೆ ಯುವಕನಿಂದ ಕರೆ ಬಂದಿದೆ. ಈ ವೇಳೆ ಯುವತಿಯೊಂದಿಗೆ ಯುವಕ ಸಂಭಾಷಣೆ ನಡೆಸಿದ್ದಾನೆ ಎಂದು ಹೇಳಲಾಗಿದೆ.

    ನಂತರ ಡಿಸೆಂಬರ್ 28ರಂದು ಮತ್ತೆ ಕರೆ ಮಾಡಿದ ಯುವಕ ಯುವತಿಗೆ ನಂಬಿಕೆ ಬರುವಂತೆ ಮಾತನಾಡಿದ್ದಾನೆ. ಈ ಮಧ್ಯೆ ತನಗೆ ಹಲವು ಹೂಡಿಕೆ ಕಂಪನಿಗಳ ಪರಿಚಯವಿದ್ದು ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾನೆ.

    ಡಿಸೆಂಬರ್ 30ರಂದು ಪಡುವರಹಳ್ಳಿಯ ಸರ್ಕಲ್ ಬಳಿ ಕರೆಸಿಕೊಂಡು ಸ್ವಲ್ಪ ಸಮಯ ಮಾತನಾಡಿದ್ದಾನೆ. ಬಳಿಕ ನನ್ನ ಬೈಕನ್ನು ಸರ್ವೀಸ್ ಗೆ ಕೊಟ್ಟಿದ್ದೇನೆ. ತನ್ನನ್ನು ಮಣಿಪಾಲ್ ಜಂಕ್ಷನ್ ಬಳಿ ಇರುವ ಬೈಕ್ ಶೋ ರೂಂ ಬಳಿ ಬಿಡುವಂತೆ ಕೇಳಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಯುವಕನೇ ಯುವತಿಯ ಸ್ಕೂಟಿಯನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

    ಬಳಿಕ ಮಣಿಪಾಲ್ ಜಂಕ್ಷನ್ ಬಳಿ ಸ್ಕೂಟರನ್ನು ನಿಲ್ಲಿಸಿ, ನಿನ್ನ ಜೊತೆ ಮಾತನಾಡಬೇಕೆಂದು ಯುವತಿಯನ್ನು ಸ್ಕೂಟಿಯಿಂದ ಕೆಳಗೆ ಇಳಿಸಿದ್ದಾನೆ. ಯುವತಿ ಸ್ಕೂಟಿಯಿಂದ ಇಳಿದಾಕ್ಷಣ ವೇಗವಾಗಿ ಸ್ಕೂಟಿ ಚಲಾಯಿಸಿಕೊಂಡು ಹೋಗಿದ್ದಾನೆ. ಈ ಸಂಬಂಧ ಎನ್ ಆರ್ ಪೋಲಿಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss