ನವದೆಹಲಿ: ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಗಡುವನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿದೆ. ಮಂಗಳವಾರದ ಅಧಿಸೂಚನೆಯಲ್ಲಿ ಹಣಕಾಸು ಸಚಿವಾಲಯವು ಜುಲೈ 1, 2023 ರಿಂದ ಎಲ್ಲಾ ಲಿಂಕ್ ಮಾಡದೇ ಹೋದ್ರೆ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗುತ್ತವೆ.
ಜೂನ್ 30, 2023 ರವರೆಗೆ ಪ್ಯಾನ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ಗಳಿಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. ಜೊತೆಗೆ, ಹೆಸರು, ಫೋನ್ ಸಂಖ್ಯೆ ಅಥವಾ ಜನ್ಮ ದಿನಾಂಕದಲ್ಲಿ ಹೊಂದಿಕೆಯಾಗದ ಕಾರಣ ನೀವು ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ವಿವರಗಳನ್ನು ನೀವು ಪ್ಯಾನ್ ಅಥವಾ ಆಧಾರ್ ಡೇಟಾಬೇಸ್‌ನಲ್ಲಿ ಸರಿಪಡಿಸಬಹುದು.
