Friday, April 19, 2024
spot_img
More

    Latest Posts

    ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬಿಇಒ ಒಬ್ಬರು ಸ್ಪೂರ್ತಿ ನೀಡಿದ ಪತ್ರ ವೈರಲ್

    ಹಾಸನ: ಈಗಾಗಲೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭಗೊಂಡು ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ ಕೂಡ ಆರಂಭಗೊಳ್ಳಲಿದೆ.

    ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರೋದು ಧೈರ್ಯ, ಸ್ಪೂರ್ತಿ ತುಂಬುವ ಮಾತು. ಈ ಕೆಲಸವನ್ನು ಬಿಇಒ ಒಬ್ಬರು ಮಾಡಿದ್ದು, ಆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಓದಿದ್ರೇ ಖಂಡಿತವಾಗಿಯೂ ನಿಮಗೂ ಸ್ಪೂರ್ತಿಯಾಗಲಿದೆ.

    ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವಂತ ಕೆ.ಪಿ ನಾರಾಯಣ ( Beluru BEO K P Narayana ) ಅವರು, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಬಗ್ಗೆ ತೋರಿರುವಂತ ಪ್ರೀತಿ ಎಲ್ಲರೂ ಮೆಚ್ಚುವಂತಿದೆ. ಅಲ್ಲದೇ ಪರೀಕ್ಷೆಗೆ ಹಾಜರಾಗುವಂತ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದಂತೆ ಇದೆ. ತಮ್ಮ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮದೇ ಹೆಸರು ಹಾಕಿಕೊಂಡು ಓದುವಂತೆ ಬರೆದಿರುವಂತೆ ಇರುವ ಪತ್ರ ಮಾತ್ರ, ನಿಜಕ್ಕೂ ಮಕ್ಕಳ ನಾಡಿ ಮಿಡಿತ, ಪೋಷಕರಿಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.

    ಅವರು ಮಕ್ಕಳಿಗಾಗಿ ಬರೆದಂತ ಪತ್ರದಲ್ಲಿ ಪರೀಕ್ಷಾ ಸಿದ್ಧತೆ, ಏಕಾಗ್ರತೆ, ಮುಂಜಾಗ್ರತಾ ಕ್ರಮಗಳು, ಪರೀಕ್ಷಾ ಕೊಠಡಿಯಲ್ಲಿ ಮಕ್ಕಳು ಹೇಗಿರಬೇಕು. ಪರೀಕ್ಷೆ ಆರಂಭದ ನಂತ್ರ ಪ್ರಶ್ನೆ ಪತ್ರಿಕೆ ಪಡೆದುಕೊಂಡು ಹೇಗೆ ಓದಬೇಕು. ಅದಕ್ಕೆ ಯಾವ ರೀತಿಯಲಾಲಿ ಅರ್ಥೈಸಿಕೊಂಡು ಉತ್ತರಿಸಬೇಕು. ಪ್ರತಿ ವಿಷಯದ ಪರೀಕ್ಷೆಯ ನಂತ್ರ ಮುಂದಿನ ವಿಷಯದ ಪರೀಕ್ಷೆಗೆ ತಯಾರಿ ಹೇಗೆ ನಡೆಸಬೇಕು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಮಕ್ಕಳಿಗೆ ಅರ್ಧೈಸಿ ಹೇಳಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss