Tuesday, September 17, 2024
spot_img
More

    Latest Posts

    ಕುಂದಾಪುರ: ಸಮಾನ ನಾಗರಿಕ ಸಂಹಿತೆ ಜಾರಿಗೆ ನಮ್ಮ ಸರಕಾರ ಬದ್ಧ – ಸಚಿವ ಸುನಿಲ್ ಕುಮಾರ್

    ಕುಂದಾಪುರ: ಕರ್ನಾಟಕದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎನ್ನುವ ಒಲವನ್ನು ಸಿಎಂ ವ್ಯಕ್ತಪಡಿಸಿದ್ದು, ನಮ್ಮ ಸರಕಾರ ಇದಕ್ಕೆ ಬದ್ಧವಾಗಿದೆ. ಮುಂದಿನ ಅಧಿವೇಶನದ ಸಂದರ್ಭ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

    ಕೋಟದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಸಮಾನ ನಾಗರಿಕ ಸಂಹಿತೆ ವಿಷಯದಲ್ಲಿ, ಮುಖ್ಯಮಂತ್ರಿಗಳ ನಿಲುವನ್ನು ಸ್ವಾಗತಿಸುತ್ತೇವೆ. ಇದರಲ್ಲಿ ಯಾಕೆ ಬೇಕು ಎನ್ನುವ ಚರ್ಚೆ ಇಲ್ಲ. ಎಲ್ಲರೂ ಒಂದಾಗಿ ಯೋಚನೆ ಮಾಡಬೇಕು, ಎಲ್ಲರೂ ಒಂದಾಗಿ ಚಟುವಟಿಕೆ ಮಾಡಬೇಕು. ಪ್ರತ್ಯೇಕತೆಗಳು ಎಲ್ಲೂ ಕೂಡ ನಿರ್ಮಾಣ ಆಗಬಾರದು ಎಂಬುದು ಇದರ ಹಿಂದಿರುವ ಉದ್ದೇಶವಾಗಿದೆ ಎಂದರು. ಏಕರೂಪದ ಕಾನೂನು ಜಾರಿಗೆ ತರುತ್ತೇವೆ ಎಂದು ಬಿಜೆಪಿ ಹಲವು ವರ್ಷಗಳಿಂದ ಪ್ರಣಾಳಿಕೆಯಲ್ಲಿ ಹೇಳಿದೆ ಎಂದ ಅವರು ಇದನ್ನು ಜಾರಿಗೆ ತರಲು ಬೇರೆ ರಾಜ್ಯಗಳು ಈಗಾಗಲೇ ಮುಂದಾಗಿವೆ. ಕರ್ನಾಟಕ ರಾಜ್ಯ ಕೂಡ ಮುಂದಾಗುತ್ತಿದೆ ಎಂದು ಹೇಳಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss