ಮಂಗಳೂರು: 33/11 ಕೆವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ಪ್ರಗತಿ ನಗರ ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಮೇ 24) ರ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಪಿ.ವಿ.ಎಸ್, ಕರಂಗಲ್ಪಾಡಿ, ಅಂಬೇಡ್ಕರ್ ಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತಯವಾಗಲಿದೆ.
ಮೂಡಬಿದಿರೆ: 110/11 ಕೆವಿ ಮೂಡುಬಿದಿರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಇರುವೈಲು, ಗಂಟಾಲ್ ಕಟ್ಟೆ, ಪುಚ್ಚೆಮೊಗರು ಎಕ್ಸ್ ಪ್ರೆಸ್, ಗಾಂಧಿನಗರ ಮತ್ತು ಮೂಡುಬಿದಿರೆ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 24ರ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಹಲವೆಡೆ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಮೂಡುಬಿದಿರೆಯ ಮಾಸ್ತಿಕಟ್ಟೆ, ಶೇಡಿಗುರಿ, ಹೊಸಬೆಟ್ಟು, ಇರುವೈಲು, ಹೊಸ್ಮಾರ್ ಪದವು, ಕೊನ್ನೆಪದವು, ಕೋಟೆಬಾಗಿಲು, ಗಂಟಾಲ್ ಕಟ್ಟೆ, ಕಲ್ಯಾಣಿಕೆರೆ, ಮಾರೂರು ಹೊಸಂಗಡಿ, ನೆತ್ತೋಡಿ, ಮೂಡುಬಿದಿರೆ ಟೌನ್, ಗಾಂಧಿನಗರ, ಮಹಾವೀರ ಕಾಲೇಜು ರೋಡ್, ಪುಚ್ಚೆಮೊಗರು, ನೆಲ್ಲಿಗುಡ್ಡೆ, ಸ್ವರಾಜ್ ಮೈದಾನ, ಒಂಟಿಕಟ್ಟೆ, ಅರಮನೆ ಬಾಗಿಲು, ಜ್ಯೋತಿನಗರ, ಜೈನ್ ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

