Tuesday, July 16, 2024
spot_img
More

  Latest Posts

  ಕಾಟಿಪಳ್ಳದಲ್ಲಿ ಸಂಭ್ರಮದ ಈದ್ ಮಿಲಾದ್ ..!

  ಕಾಟಿಪಳ್ಳ : ಇಲ್ಲಿನ ಪಣಂಬೂರ್ ಮುಸ್ಲಿಂ ಜಮಾಅತ್ – ಮುಹಿಯುದ್ದೀನ್ ಜುಮ್ಮ ಮಸ್ಜಿದ್ ನ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ.ಸ.) ರವರ ಜನ್ಮದಿನಾಚರಣೆ ಮೀಲಾದನ್ನು ಗುರುವಾರ ತಾ.28.09.2023 ರಂದು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯ್ತು.

  ಜಮಾಅತ್ ಅಧ್ಯಕ್ಷ ಎಸ್. ರಹ್ಮತುಲ್ಲಾ ಹಾಗೂ ಕಮಿಟಿ ಭಾರವಾಹಿಗಳ ನೇತ್ರತ್ವದಲ್ಲಿ ಜಮಾಅತ್ ನ ಹಿರಿಯ ಕಿರಿಯ ಭಕ್ತಾದಿಗಳು ಸೇರಿದ್ದರು.

  ಮಸೀದಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಶ್ರಂಗರಿಸಿ, ಬೆಳಗ್ಗೆ ವಿದ್ಯಾರ್ಥಿಗಳಗೊಂಡು ಊರವರೆಲ್ಲರೂ ಪ್ರವಾದಿ ಮದ್ಹ್ ಗೀತೆಗಳನ್ನು ಹಾಡುತ್ತಾ, ದಫ್ ಮುಟ್ಟುತ್ತಾ ಸೌಹಾರ್ದ ಸಂದೇಶದೊಂದಿಗೆ ಕಾಟಿಪಳ್ಳದ ಮುಖ್ಯ ರಸ್ತೆಗಳಲ್ಲಿ ಬ್ರಹತ್ ಜಾಥಾ ವನ್ನು ನಡೆಸಲಾಯ್ತು.
  ಸಿಹಿತಿಂಡಿ – ಪಾನೀಯಗಳನ್ನು ನಬಿದಿನದ ಮೆರವಣಿಗೆಯುದ್ದಕ್ಕೂ ಊರವರು ನೀಡಿದರು.

  ಧರ್ಮಗುರು ಖತೀಬರಾದ ನಾಸಿರ್ ಮದನಿಯವರು ಮೀಲಾದ್ ಸಂದೇಶ ನೀಡಿದರು.

  ಮಸೀದಿಯಲ್ಲಿ ಮೌಲಿದ್ ಪಾರಾಯಣದ ನಂತರ ಊರವರೆಲ್ಲರಿಗೂ ಅನ್ನಸಂತರ್ಪಣೆ ನಡೆಯಿತು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss