ಮಂಗಳೂರು: ಲಯನ್ಸ್ ಕ್ಲಬ್ ಮಂಗಳಾದೇವಿ, ಲೇಡಿಸ್ ಬ್ಯೂಟಿ ಅಸೋಸಿಯೇಷನ್ ಮಂಗಳೂರು ಇದ್ರ ವತಿಯಿಂದ ಡಿಎಕ್ಸ್ಎನ್ ಮಾರ್ಕೆಟಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಆರೋಗ್ಯ ಉತ್ಪನ್ನಗಳ ಮಾಹಿತಿ ಕಾರ್ಯಾಗಾರ ಮಂಗಳೂರಿನ ಕದ್ರಿಯ ಅಶೋಕ ಭವನ ಸಭಾಬವನದಲ್ಲಿ ನೆರವೇರಿತು.

ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಅನಿಲ್ ದಾಸ್ ದೀಪಬೆಳಗಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮಲ್ಲಿಕಾ ಆಳ್ವ, ಕೋಶಾಧಿಕಾರಿ ಅನಿತಾ ಗೊಮ್ಸ್, ಡಿಎಕ್ಸ್ಎನ್ ಹಿರಿಯ ಅಧಿಕಾರಿ ಶಾಮ್ ರಾವ್, ಹಿತಾಕ್ಷಿ, ಬಬಿತ, ಭಾರತಿ ಶೆಟ್ಟಿ, ವಿನೋದ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
