ಉಡುಪಿ:ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳು ಬೀದಿ ರಂಪಾಟ ನಡೆಸಿರುವ ಘಟನೆ ಮಣಿಪಾಲದ ರಸ್ತೆಯಲ್ಲಿ ತಡರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಯುವತಿಯೋರ್ವಳು ಯುವಕನೊಂದಿಗೆ ಪಿಜ್ಜಾ ಶಾಪ್‌ಗೆ ಬಂದಿದ್ದು, ಕುಡಿದ ಮತ್ತಿನಲ್ಲಿ ಪಿಜಾ ಶಾಪ್‌ನಲ್ಲಿ ಕಿರಿಕ್ ಮಾಡಿದ್ದಾಳೆ.ಈ ವೇಳೆ ಇಬ್ಬರನ್ನೂ ಪಿಜ್ಜಾ ಶಾಪ್ ಸಿಬಂದಿ ಹೊರಗೆ ಕಳುಹಿಸಿದ್ದಾರೆ. ಇದರಿಂದ ಸಿಬ್ಬಂದಿ ಮೇಲೆ ಯುವತಿ ಹಲ್ಲೆಗೆ ಯತ್ನಿಸಿದ್ದಾಳೆಂದು ವರದಿಯಾಗಿದೆ.
ಕುಡಿದ ಮತ್ತಿನಲ್ಲಿ ಸಾರ್ವಜನಿಕರ ಮೇಲೂ ರಂಪಾಟ ನಡೆಸಿದ್ದಾಳೆ. ಯುವತಿಯ ತಲೆಗೆ ತಣ್ಣೀರು ಹಾಕಿ ನಶೆ ಇಳಿಸಲು ಪ್ರಯತ್ನಿಸಿದ್ದು, ಇದರಿಂದ ಸಿಟ್ಟುಗೊಂಡ ಆಕೆ ಸಾರ್ವಜನಿಕರ ಮೇಲೂ ಹಲ್ಲೆಗೆ ಮುಂದಾಗಿದ್ದಾಳೆ.
ಬಳಿಕ ಮಣಿಪಾಲ ಪೊಲೀಸರು ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
