ಎಳನೀರು ದೇಹವನ್ನು ತಂಪಾಗಿಸಿ ನಿರ್ಜಲೀಕರಣವನ್ನು ಹೋಗಲಾಡಿಸಿ ಒಳಗಿನಿಂದ ದೇಹವನ್ನು ಕ್ಲೀನ್ ಮಾಡುತ್ತದೆ. ಇದರಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಅಪಾರ ಪ್ರಮಾಣದಲ್ಲಿವೆ.
ಎಳನೀರಿನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್, ವಿಟಮಿನ್ ಸಿ, ಅಮೈನೊ ಆಮ್ಲಗಳು ಮತ್ತು ಮೆಗ್ನೀಷಿಯಂ, ಪೊಟ್ಯಾಶಿಯಂ ತರಹದ ಖನಿಜಾಂಶಗಳ ಜೊತೆಗೆ ನೈಸರ್ಗಿಕವಾದ ಎಲೆಕ್ಟ್ರೋಲೈಟ್ ಅಂಶಗಳು ಇರುವುದರಿಂದ ನಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುತ್ತವೆ.
ಎಳನೀರನ್ನು ನಮ್ಮ ಒಣ ತ್ವಚೆ, ಚರ್ಮದ ಕೆರೆತ ಮತ್ತು ಚರ್ಮದ ಸಿಪ್ಪೆ ಸುಲಿದುಕೊಳ್ಳುವ ಸಮಸ್ಯೆ ಹೋಗಲಾಡಿಸಲು ಬಳಕೆ ಮಾಡಬಹುದಾಗಿದೆ. ನೆತ್ತಿಯ ಭಾಗಕ್ಕೂ ತುಂಬಾ ಒಳ್ಳೆಯದು. ತಲೆಕೂದಲಿನ ಹಲವಾರು ಸಮಸ್ಯೆಗಳಿಗೆ ಮತ್ತು ತಲೆ ಹೊಟ್ಟು ತೊಂದರೆಗೂ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಶುದ್ಧವಾದ ಎಳನೀರು ಇದ್ದರೆ ನೆತ್ತಿಯ ಭಾಗಕ್ಕೆ ಹಾಗೂ ತಲೆಕೂದಲಿಗೆ ಅನ್ವಯಿಸಬಹುದು.ಜೋಜೋಬಾ ಅಥವಾ ಅವಕ್ಯಾಡೋ ಆಯಿಲ್ ಜೊತೆಗೆ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡು ಮಸಾಜ್ ಮಾಡಿ ಸ್ನಾನ ಮಾಡಬಹುದು. ಸ್ನಾನ ಮಾಡಿದ ನಂತರ ಕೂಡ ಹಚ್ಚಿಕೊಳ್ಳಬಹುದು. ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಬಳಸಬಹುದಾಗಿದೆ.
ಅರಿಶಿನದ ಜೊತೆ ಎಳನೀರನ್ನು ಮಿಶ್ರಣ ಮಾಡಿ ಮುಖದ ಭಾಗಕ್ಕೆ ಹಚ್ಚುತ್ತಾ ಬಂದರೆ ಉತ್ತಮ ಫಲಿತಾಂಶ ಸಿಗುವುದು. ಎಳನೀರಿನಲ್ಲಿರುವ ಆಂಟಿ ಆಕ್ಸಿಡೆಂಟ್, ಖನಿಜಾಂಶಗಳು ಮತ್ತು ಫ್ಯಾಟಿ ಆಸಿಡ್ ಮುಖದ ಚರ್ಮವನ್ನು ಸ್ಮೂತ್ ಮಾಡುತ್ತದೆ. ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ನಂತರ ಮುಖ ತೊಳೆದುಕೊಳ್ಳಬಹುದು.
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಹೆಚ್ಚು ಆರೋಗ್ಯ ಲಾಭಗಳು ಸಿಗುವುದು. ಎಳನೀರಿನಲ್ಲಿ ಲೌರಿಕ್ ಆಮ್ಲವಿದ್ದು, ಪ್ರತಿರೋಧಕ ಶಕ್ತಿ ವೃದ್ಧಿಸುವುದು, ಚಯಾಪಚಯ ಹೆಚ್ಚಿಸುವುದು ಮತ್ತು ತೂಕ ಇಳಿಸಲು ಸಹಕಾರಿ. ಮಲಬದ್ಧತೆ ಮತ್ತು ನಿರ್ಜಲೀಕರಣ ನಿವಾರಣೆ ಮಾಡಲು ಗರ್ಭಿಣಿಯರು ಎಳನೀರು ಕುಡಿಯಬೇಕು. ಎಂದು ಹೇಳಲಾಗುತ್ತದೆ. ಹ್ಯಾಂಗ್ ಓವರ್ ಸಮಸ್ಯೆ ಇದ್ದರೆ ಒಂದು ಲೋಟ ಎಳನೀರು ಕುಡಿದರೆ ಉತ್ತಮ.
