Sunday, July 3, 2022

ಮಂಗಳೂರು : ಭಾರೀ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲವೃತ

ಮಂಗಳೂರು : ಮಂಗಳೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಲ್ಲೇ ನೀರು ನಿಂತಿದ್ದು,...
More

    Latest Posts

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ(4) ವಿದ್ಯುತ್...

    ವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ, ಮೂವರು ಅರೆಸ್ಟ್

    ವಿಟ್ಲ:ಅಕ್ರಮ ಮಾದಕವಸ್ತುಗಳ ಸಾಗಾಟದ ವೇಳೆ ಕಾರ್ಯಾಚರಣೆ ನಡೆಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಜಲಲೂದ್ಧಿನ್, ಪೈಝಲ್ ಎಂದು ಗುರುತಿಸಲಾಗಿದೆ

    Breaking News ನೂಪೂರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಮೆಡಿಕಲ್ ಶಾಪ್ ಮಾಲೀಕನ ಕೊಲೆ

    ಅಮರಾವತಿ : ದೇಶದಲ್ಲಿ ಸಂಚಲನ ಸೃಷ್ಟಿಸಿದ ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಮೊನ್ನೆಯಷ್ಟೆ ಉದಯಪುರದಲ್ಲಿ ಟೈಲರ್ ಓರ್ವನ ಶಿರಚ್ಚೇಧನವಾಗಿದೆ. ಸದ್ಯ ನೂಪುರ್ ಶರ್ಮಾ ಬೆಂಬಲಿಸಿದಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಮತ್ತೊಂದು ಹತ್ಯೆಯಾಗಿದೆ...

    ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ ಪ್ರದರ್ಶನ

    ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಮಾನವ ರಹಿತ ವೈಮಾನಿಕ ವಾಹನಗಳ ಅಭಿವೃದ್ಧಿಲಿ ಪ್ರಮುಖ ದಾಪುಗಾಲಿಟ್ಟಿದೆ. ಡಿಆರ್‌ಡಿಒ ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ...

    ‘ಧರ್ಮದೈವ’ ತುಳು ಕಿರುಚಿತ್ರ ಲೋಕಾರ್ಪಣೆ : ತುಳು ಸಮಾಜ ದೈವಾರಾಧನೆ ನಂಬಿಕೆ ಮೇಲೆ ನಿಂತಿದೆ; ಡಾ.ಎಂ.ಮೋಹನ್ ಆಳ್ವ

    ಮೂಡಬಿದಿರೆ : “ದೈವಾರಾಧನೆ ತುಳುನಾಡಿನ ಸಂಸ್ಕೃತಿಯ ಬಹು ಮುಖ್ಯ ಭಾಗ ಎಂಬ ಸತ್ಯವನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ, ಅಲ್ಲದೆ ಈ ವಿಚಾರಗಳು ಬರಿ ಮೂಢನಂಬಿಕೆಯಲ್ಲ, ಮೂಲ ನಂಬಿಕೆ. ಇಡೀ ತುಳು ಸಮಾಜವೇ ದೈವಾರಾಧನೆಯ ನಂಬಿಕೆ ಮೇಲೆ ನಿಂತಿದೆ ‘ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ .ಎಮ್. ಮೋಹನ್ ಆಳ್ವ ಹೇಳಿದರು.


    ತುಳುನಾಡಿನ ದೈವಾರಾಧನೆ ಕುರಿತು ಪುತ್ತೂರಿನ ಸೋನು ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ ‘ಧರ್ಮದೈವ’ ತುಳುನಾಡ ಬೊಲ್ಪು ತುಳು ಕಿರುಚಿತ್ರವನ್ನು ಇಲ್ಲಿನ ಕುವೆಂಪು ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ತುಳುವರು ಸತ್ಯ ಚಿತ್ತಗಳಲ್ಲಿ ನಂಬಿಕೆಯುಳ್ಳವರು. ಅವರ ಪ್ರತಿಯೊಂದು ಕೃತಿಯಲ್ಲೂ ಅದು ಹಾಸು ಹೊಕ್ಕಾಗಿದೆ’ ಎಂದವರು ನುಡಿದರು.

    ಹಲವು ಆಯಾಮ:
    ‘ದೈವಾರಾಧನೆ ತುಳುನಾಡಿನ ಸಂಸ್ಕೃತಿ, ಆಚರಣೆ, ನಂಬಿಕೆಯನ್ನು ಒಳಗೊಂಡ ಒಂದು ಶ್ರೇಷ್ಠ ಪದ್ಧತಿ. ಅದನ್ನು ಉಳಿಸಿಕೊಂಡು ಬಹಳ ಕಲಾತ್ಮಕವಾಗಿ ದೈವದ ಕಾರ್ಣಿಕವನ್ನು ತೋರಿಸುವ ‘ಧರ್ಮದೈವ’ಕಿರುಚಿತ್ರ ಹಲವು ಆಯಾಮಗಳಲ್ಲಿ ಗಮನ ಸೆಳೆಯುತ್ತದೆ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಚಿತ್ರ ತಂಡದ ಪರವಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಮಹೇಶ್ ಮೋಟರ್ಸ್ ನ ಎ.ಕೆ.ಜಯರಾಮ ಶೇಖ, ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಮುಖ್ಯ ಅತಿಥಿಗಳಾಗಿದ್ದರು. ಧರ್ಮದೈವ ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ನಿರ್ಮಾಪಕ ಸುಧಾಕರ್ ಪಡೀಲ್ ವಂದಿಸಿದರು.

    ಪ್ರೀಮಿಯರ್ ಶೋ:
    ಈ ಸಂಧರ್ಭದಲ್ಲಿ ಧರ್ಮದೈವ ಕಿರುಚಿತ್ರದ ಪ್ರೀಮಿಯರ್ ಶೋ ಪ್ರದರ್ಶನಗೊಂಡಿತು. ಕಿರುಚಿತ್ರ ವೀಕ್ಷಿಸಿದ ಡಾ.ಎಮ್. ಮೋಹನ್ ಆಳ್ವ, ಧರ್ಮದೈವ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಮಗ್ರ ಚಿತ್ರ ತಂಡದ ಪರವಾಗಿ ಡಾ.ಮೋಹನ್ ಆಳ್ವರನ್ನು ಗೌರವಿಸಲಾಯಿತು.
    ಕೋವಿಡ್ ನಿಯಮಾವಳಿಯಂತೆ ನಡೆದ ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ,ನಾಯಕ ನಟ ರಮೇಶ್ ರೈ ಕುಕ್ಕುವಳ್ಳಿ, ಚಿತ್ರದ ಸಂಭಾಷಣೆಕಾರ ಹಮೀದ್ ಪುತ್ತೂರು, ಸಂಕಲನಕಾರ ರಾಧೇಶ್ ರೈ ಮೊಡಪ್ಪಾಡಿ,ಕ್ಯಾಮರಾ ಮ್ಯಾನ್ ಹರೀಶ್ ಪುತ್ತೂರು , ಚಿತ್ರ ತಂಡದ ದೀಕ್ಷಾ ಡಿ. ರೈ, ಧನು ರೈ, ವಸಂತ ಲಕ್ಷ್ಮಿ, ಅಶ್ವಿನಿ ಪೆರುವಾಯಿ, ಕೌಶಿಕ್ ಕುಂಜಾಡಿ, ಅನುಷಾ ಅಲಿಮಾರ್, ಸುಧೀರ್, ಪ್ರವೀಣ್ ಶೆಟ್ಟಿ ಬಜ್ಪೆ, ಮಾಲಾ ಚಿತ್ತರಂಜನ್ ಶೆಟ್ಟಿ, ಮನ್ವಿತ್ ಸಿ, ಶೆಟ್ಟಿ, ಹೇಮಾ ಜಯರಾಮ್ ರೈ ವಕೀಲರಾದ ಶಶಿಧರ್ ಬಿ. ಎನ್. ಉಪಸ್ಥಿತರಿದ್ದರು.
    ‘ಧರ್ಮದೈವ’ ಚಿತ್ರ ಶೀಘ್ರದಲ್ಲಿ ಜನರ ಮುಂದೆ ಬರಲಿದೆ ಎಂದು ಕಥೆ,ಚಿತ್ರಕಥೆ ಮತ್ತು ನಿರ್ದೇಶನ ನೀಡಿದ ನಿತಿನ್ ರೈ ಕುಕ್ಕುವಳ್ಳಿ ಪ್ರಕಟಿಸಿದರು.

    Latest Posts

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ(4) ವಿದ್ಯುತ್...

    ವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ, ಮೂವರು ಅರೆಸ್ಟ್

    ವಿಟ್ಲ:ಅಕ್ರಮ ಮಾದಕವಸ್ತುಗಳ ಸಾಗಾಟದ ವೇಳೆ ಕಾರ್ಯಾಚರಣೆ ನಡೆಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಜಲಲೂದ್ಧಿನ್, ಪೈಝಲ್ ಎಂದು ಗುರುತಿಸಲಾಗಿದೆ

    Breaking News ನೂಪೂರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಮೆಡಿಕಲ್ ಶಾಪ್ ಮಾಲೀಕನ ಕೊಲೆ

    ಅಮರಾವತಿ : ದೇಶದಲ್ಲಿ ಸಂಚಲನ ಸೃಷ್ಟಿಸಿದ ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಮೊನ್ನೆಯಷ್ಟೆ ಉದಯಪುರದಲ್ಲಿ ಟೈಲರ್ ಓರ್ವನ ಶಿರಚ್ಚೇಧನವಾಗಿದೆ. ಸದ್ಯ ನೂಪುರ್ ಶರ್ಮಾ ಬೆಂಬಲಿಸಿದಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಮತ್ತೊಂದು ಹತ್ಯೆಯಾಗಿದೆ...

    ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ ಪ್ರದರ್ಶನ

    ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಮಾನವ ರಹಿತ ವೈಮಾನಿಕ ವಾಹನಗಳ ಅಭಿವೃದ್ಧಿಲಿ ಪ್ರಮುಖ ದಾಪುಗಾಲಿಟ್ಟಿದೆ. ಡಿಆರ್‌ಡಿಒ ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ...

    Don't Miss

    KSRTCಯಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ :ಬಸ್ ಪಾಸ್ ಅವಧಿ ವಿಸ್ತರಣೆ

    ಬೆಂಗಳೂರು: 2021-22ನೇ ಸಾಲಿನ ಪದವಿ, ವೃತ್ತಿಪರ ಕೋರ್ಸ್, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಈಗಾಗಲೇ ವಿತರಿಸಿರುವಂತ ವಿದ್ಯಾರ್ಥಿ ಉಚಿತ, ರಿಯಾಯಿತಿ ಬಸ್ ಪಾಸ್ ಅವಧಿಯ ನಂತ್ರವೂ, ಪರೀಕ್ಷೆ ನಿಗದಿ ಪಡಿಸಲಾಗಿದೆ. ಈ...

    ಮಂಗಳೂರು: ಪಂಪ್‌ವೆಲ್‌ನಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ರಸ್ತೆ ಸಂಚಾರಕ್ಕೆ ಅಡಚಣೆ

    ಮಂಗಳೂರು: 5 ದಶಕಕ್ಕೂ ಹಳೆಯದಾದ ನೀರಿನ ಪೈಪ್‌ ಭೂಮಿಯ ಆಳದಲ್ಲಿ ಒಡೆದು ಹೋಗಿ ರಸ್ತೆ ಕುಸಿದ ಘಟನೆ ನಗರದ ಕಂಕನಾಡಿಯ ಪಂಪ್‌ವೆಲ್‌ ಜಂಕ್ಷನ್‌ ಬಳಿ ಮಧ್ಯಾಹ್ನ ವೇಳೆ ನಡೆದಿದೆ.

    ಒಲಂಪಿಕ್ ಹಾಗೂ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ ನಿಧನ

    ನವದೆಹಲಿ: ಒಲಂಪಿಕ್ ಹಾಗೂ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ (75) ಇಂದು ಬೆಳಿಗ್ಗೆ ಜಲಂಧರ್ ನಲ್ಲಿ ನಿಧನರಾದರು. 70 ರ ದಶಕಗಳಲ್ಲಿ ವರಿಂದರ್...

    ಉತ್ತಮ ಆರೋಗ್ಯಕ್ಕಾಗಿ ಬ್ರೌನ್‌ ರೈಸ್‌ ಸೇವಿಸಿ, ಅನೇಕ ಕಾಯಿಲೆಗಳನ್ನೂ ದೂರವಿಡಬಲ್ಲ ಆಹಾರವಿದು

    ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಕ್ಕಿಯನ್ನು ಜಾಸ್ತಿ ಬಳಸಬಾರದು ಅನ್ನೋ ಚರ್ಚೆಗಳನ್ನು ಸಾಕಷ್ಟು ಕೇಳಿದ್ದೇವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಬ್ರೌನ್ ರೈಸ್ ನಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಬ್ರೌನ್‌ ರೈಸ್‌...

    ಮಂಗಳೂರು: ಸಿಎನ್‍ಜಿ ಬೆಲೆ ಇಳಿಕೆಗೆ ಕೋರಿ ಮನವಿ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

    ಮಂಗಳೂರು:ಪರಿಸರ ಸ್ನೇಹಿ ಇಂಧನ ಸಿಎನ್‍ಜಿಯ ಬೆಲೆಯನ್ನು ಆದಷ್ಟು ಇಳಿಕೆ ಮಾಡುವಂತೆ ಕೋರಿ ದಕ್ಷಿಣ ಕನ್ನಡದ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾಧಿಕಾರಿಯವರ ಕಚೇರಿಯಿಂದ ಪತ್ರ ಮುಖೇನ ಸಂಬಂಧಿಸಿದ ಕಾರ್ಪೋರೇಟ್ ಕಚೇರಿಗೆ ಮನವಿ...