ಕರ್ನಾಟಕ ಸಾಂಸ್ಕೃತಿಕ ಪರಿಷತ್ ಹಾಗೂ ಸೃಷ್ಟಿ ಶಕ್ತಿ ಸಂಸ್ಥೆ (ರಿ.) ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ವಿವಿಧ ಕಲೆ, ಸಾಹಿತ್ಯ,ನಾಡು ನುಡಿ ಸಂಸ್ಕೃತಿಗೆ ವರ್ಣಿಸಲದಳವಾದ ಅನುಪಮ ಸೇವೆ ಸಲ್ಲಸಿರುವ ಹಾಗೂ ಸ್ತುತ್ಯಾರ್ಹವಾದ ಸಾಧನೆ ಮಾಡಿದ ಅರ್ಹಗಣ್ಯ ಮಹನೀಯರನ್ನು ಗುರುತಿಸುವ ಮೂಲಕ ಭವ್ಯ ಕರ್ನಾಟಕದ ಅಭಿವೃದ್ಧಿಗೆ ನೆರವಾದವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆ ಸಾಮಾಜಿಕ ಕಾರ್ಯಕರ್ತ ಡಾ.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆಯವರಿಗೆ ರಾಷ್ಟ್ರೀಯ ಮಟ್ಟದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸದ್ಭಾವನಾ ಪ್ರಶಸ್ತಿಯನ್ನು ಬೆಂಗಳೂರು ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಬಳಿಯ ಅಕ್ಕ ಮಹಾದೇವಿ ಸಭಾಂಗಣದಲ್ಲಿ ನೀಡಲಾಯಿತು.
ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಮಾತನಾಡಿ ನಮ್ಮ ಸಮಾಜ ಸೇವೆಯನ್ನು ಗುರುತಿಸಿ ನೀಡಿದ ಪ್ರಶಸ್ತಿಯಿಂದ ಇನ್ನೂ ಹೆಚ್ಚು ಸಮಾಜ ಸೇವೆ ಮಾಡಲು ಪ್ರೇರೇಪಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಬಸವನಗುಡಿ ಶ್ರೀ ಮಹಾ ಸಂಸ್ಥಾನಂ ಇದರ ಶ್ರೀ ಶ್ರೀ ಶ್ರೀ ಸಾತ್ವಿ ಯೋಗಿನಿ ಮಾತಾ, ಕನ್ನಡದ ಏಸುದಾಸ್ ಖ್ಯಾತಿಯ ಗಾಯಕ ಶಶಿದರ್ ಕೋಟೆ, ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಮತ್ತು ಸೃಷ್ಟಿ ಸಂಸ್ಥೆಯ ಅಧ್ಯಕ್ಷರಾದ ಡಾ.ಇಸಾಕ್ ದೊಡ್ಡೇರಿ, ಕರ್ನಾಟಕ ಜನಸೇವಾ ಸಂಘದ ಅಧ್ಯಕ್ಷರಾದ ಪ್ರಶಾಂತ್ ಚಕ್ರವರ್ತಿ, ಖ್ಯಾತ ವಲನ ಚಿತ್ರ ನಟ ಶಂಕರ್ ಭಟ್, ಬೆಂಗಳೂರು ಶಿಕ್ಷಣ ತಜ್ಞ ಜಿ.ಎಚ್ ನಾಗರಾಜ್ ಶೆಟ್ಟಿ,
ಜೂನಿಯತ್ ರಾಜ್ ಕುಮಾರ್ ಖ್ಯಾತಿಯ ಕೆ.ಸಿ ವೆಂಕಟರಾಮು ಉಪಸ್ಥಿತರಿದ್ದರು.
ಪತ್ರಕರ್ತ ಪರಿಸರ ಚಂದ್ರ ಶೇಖರ್ ಕಾರ್ಯಕ್ರಮ ನಿರೂಪಿಸಿದರು.