Tuesday, March 19, 2024
spot_img
More

    Latest Posts

    ಕೆಲಸದ ಒತ್ತಡದ ಮಧ್ಯೆ ಮರೆಯಬೇಡಿ ಮೂತ್ರ ವಿಸರ್ಜನೆ

    ಆರೋಗ್ಯ ಕಾಪಾಡಿಕೊಳ್ಳವುದು ಈಗಿನ ದಿನಗಳಲ್ಲಿ ಅವಶ್ಯಕವಾಗಿದೆ. ನಮ್ಮ ಬಾಹ್ಯ ಹಾಗೂ ಆಂತರಿಕ ಕೆಲಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ಕೆಲಸದ ಕಾರಣ ಮೂತ್ರವನ್ನು ಸರಿಯಾದ ಸಮಯದಲ್ಲಿ ವಿಸರ್ಜನೆ ಮಾಡುವುದಿಲ್ಲ. ಮೂತ್ರ ಕಟ್ಟಿಕೊಳ್ಳುವುದ್ರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತದೆ.

    ದೀರ್ಘಕಾಲದವರೆಗೆ ಮೂತ್ರ ವಿಸರ್ಜನೆ ಮಾಡದೆ ಹೋದಲ್ಲಿ ಮೂತ್ರದ ಸೋಂಕು ಕಾಣಿಸಿಕೊಳ್ಳುತ್ತದೆ. ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

    ಪದೇ ಪದೇ ಮೂತ್ರ ಕಟ್ಟಿಕೊಳ್ಳುವ ಜನರಿಗೆ ಮೂತ್ರಪಿಂಡ ಅಥವಾ ಗಾಳಿಗುಳ್ಳೆಯ ನೋವು ಕಾಣಿಸಿಕೊಳ್ಳುತ್ತದೆ. ಬಹಳ ಸಮಯದ ನಂತರ ಮೂತ್ರ ವಿಸರ್ಜನೆಗೆ ಹೋದಾಗ ನೋವು ಬರುತ್ತದೆ. ಮೂತ್ರ ವಿಸರ್ಜನೆಯ ನಂತರ ಸ್ನಾಯುಗಳು ಭಾಗಶಃ ಸಂಕುಚಿತಗೊಳ್ಳಬಹುದು. ಇದು ಸೆಳೆತಕ್ಕೆ ಕಾರಣವಾಗುತ್ತದೆ.

    ದೇಹದ ಕಲ್ಮಶಗಳನ್ನು ಮೂತ್ರದ ಮೂಲಕ ಹೊರ ಹಾಕಲಾಗುತ್ತದೆ. ಸರಿಯಾದ ಸಮಯದಲ್ಲಿ ಮೂತ್ರವನ್ನು ತ್ಯಜಿಸದಿದ್ದರೆ ದೇಹದಲ್ಲಿ ಸೋಂಕಿನ ಅಪಾಯ ಹೆಚ್ಚಾಗುತ್ತದೆ.

    ಮೂತ್ರ ವಿಸರ್ಜನೆ ತಡೆಯುವುದ್ರಿಂದ ಮೂತ್ರಕೋಶ, ಮೂತ್ರಪಿಂಡದಲ್ಲಿ ಕಿರಿಕಿರಿ ಮತ್ತು ಉರಿಯೂತ ಉಂಟಾಗುತ್ತದೆ. ಇದು ಹಾನಿಕಾರಕ.

    ಮೂತ್ರವನ್ನು ಕಟ್ಟಿಕೊಳ್ಳುವುದ್ರಿಂದ ಮೂತ್ರಪಿಂಡದ ಕಾರ್ಯ ನಿರ್ವಹಣೆಗೆ ಅಡ್ಡಿಯಾಗುತ್ತದೆ. ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಸಾವಿಗೂ ಕಾರಣವಾಗುತ್ತದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss