Friday, March 29, 2024
spot_img
More

    Latest Posts

    ಇನ್ನು ಮುಂದೆ ಪ್ಯಾರಾಸಿಟಮಾಲ್ ಸೇರಿ 15 ಮಾತ್ರೆ ಖರೀದಿಗೆ ಬೇಕಾಗಿಲ್ಲ ವೈದ್ಯರ ಚೀಟಿ

    ಔಷಧಿ (Medicine) ಅಂಗಡಿಗೆ ಹೋಗಿ, ಮಾತ್ರೆ (Pill) ಹೆಸರು ಹೇಳಿದ್ರೆ ಔಷಧಿ ಅಂಗಡಿ (Store) ಯವರು ಮಾತ್ರೆ ನೀಡೋದಿಲ್ಲ. ಎಲ್ಲಿ ಡಾಕ್ಟರ್ (Doctor ) ಪ್ರಿಸ್ಕ್ರಿಪ್ಷನ್ (Prescription) ಕೊಡಿ ಎನ್ನುತ್ತಾರೆ. ಕೆಲವು ಮಾತ್ರೆಗಳನ್ನು ನೀವು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಖರೀದಿ ಮಾಡುವಂತೆ ಇಲ್ಲ. ಹಾಗೆ ಮತ್ತೆ ಕೆಲವೇ ಕೆಲವನ್ನು ಔಷಧಿ ಅಂಗಡಿಯವರು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ನಿಮಗೆ ನೀಡ್ತಾರೆ. ಈ ಹಿಂದೆ ಕೊರೊನಾ (Corona ) ಸಂದರ್ಭದಲ್ಲಿ ಮಾತ್ರೆಗಳನ್ನು ನೀಡುವು ವಿಚಾರದಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ನೆಗಡಿ (Cold), ಜ್ವರ (Fever) ದ ಮಾತ್ರೆಗಳನ್ನು ಹಾಗೆಯೇ ನೀಡ್ತಿರಲಿಲ್ಲ. ಒಂದು ವೇಳೆ ಜ್ವರದ ಮಾತ್ರೆ ಕೇಳಲು ಬಂದ್ರೆ ರೋಗಿ (Patient) ಗಳ ಮಾಹಿತಿಯನ್ನು ಸಂಗ್ರಹಿಸಿಡಲಾಗ್ತಾ ಇತ್ತು. ಇದೇ ಕಾರಣಕ್ಕೆ ಅನೇಕರು ನೆಗಡಿ, ಜ್ವರದ ಮಾತ್ರೆಯನ್ನು ಔಷಧಿ ಅಂಗಡಿಯಲ್ಲಿ ಕೇಳಲು ಹೆದರುತ್ತಿದ್ದರು. ಆದ್ರೆ ಇನ್ಮುಂದೆ ಕೆಲ ಮಾತ್ರೆಗಳನ್ನು ನೀವು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಖರೀದಿ ಮಾಡ್ಬಹುದು. ಪ್ಯಾರಾಸಿಟಮಾಲ್ ಮತ್ತು ಇತರ 15 ಸಾಮಾನ್ಯವಾಗಿ ಬಳಸುವ ಔಷಧಿಗಳನ್ನು ಖರೀದಿಸಲು ಇನ್ನು ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ. ಈ ಔಷಧಿಗಳನ್ನು ಓವರ್ ದ ಕೌಂಟರ್ (OTC) ಪಟ್ಟಿಗೆ ಸೇರಿಸಲು ಸರ್ಕಾರ ಸಿದ್ಧತೆ ನಡೆಸಿದೆ.  

    ವೈದ್ಯರ ಪ್ರಿಸ್ಕಿಪ್ಷನ್ ಇಲ್ಲದೆ ಖರೀದಿ (Purchase) ಮಾಡ್ಬಹುದು ಈ ಮಾತ್ರೆ : ಮೊದಲೇ ಹೇಳಿದಂತೆ ಪ್ಯಾರಸಿಟಮಾಲ್ ಮಾತ್ರೆಯನ್ನು ನೀವು ಇನ್ಮುಂದೆ ಆರಾಮವಾಗಿ ಔಷಧಿ ಮಳಿಗೆಯಲ್ಲಿ ಖರೀದಿ ಮಾಡ್ಬಹುದು. ಬರೀ ಪ್ಯಾರಾಸಿಟಮಾಲ್ ಮಾತ್ರವಲ್ಲ, ಪ್ಯಾರಾಸಿಟಮಾಲ್ (Paracetamol), ಡಿಕ್ಲೋಫೆನಾಕ್ (Diclofenac) ಮೂಗು ಕಟ್ಟುವ ಸಮಸ್ಯೆಗೆ ಪರಿಹಾರ ನೀಡುವ ಔಷಧಿ (Nasal Decongestants) ಮತ್ತು ಅಲರ್ಜಿ (Anti Allergics) ವಿರೋಧಿ ಔಷಧಿಗಳು ಇದ್ರಲ್ಲಿ ಸೇರಿವೆ.

    ಇದಲ್ಲದೆ ಈ  ಔಷಧಿಗಳಲ್ಲಿ ನಂಜುನಿರೋಧಕ (Antiseptic) ಮತ್ತು ಸೋಂಕು ನಿವಾರಕ ಏಜೆಂಟ್, ಜಿಂಗೈವಿಟಿಸ್ ಚಿಕಿತ್ಸೆಗೆ ಬಳಸುವ ಮೌತ್ವಾಶ್ ಕ್ಲೋರೊಹೆಕ್ಸಿಡೈನ್ (Chlorohexidine), ಕೆಮ್ಮು ಚಿಕಿತ್ಸೆಗೆ ಬಳಸುವ ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಲೋಜೆಂಜಸ್ (Dextromethorphan Hydrobromide Lozenges), ಆಂಟಿ-ಬ್ಯಾಕ್ಟೀರಿಯಲ್ ಮೊಡವೆ ಫಾರ್ಮುಲೇಶನ್,  ಆಂಟಿಫಂಗಲ್ ಕ್ರೀಮ್, ಮೂಗು ಕಟ್ಟುವ ಸಮಸ್ಯೆಗೆ ಪರಿಹಾರ ನೀಡುವ ಔಷಧಿ, ನೋವು ನಿವಾರಕ ಕ್ರೀಮ್, ಆಂಟಿ ಅಲರ್ಜಿ ಕ್ಯಾಪ್ಸುಲ್ ಗಳನ್ನು ಇದು ಒಳಗೊಂಡಿದೆ. ಈ ಮಾತ್ರೆ, ಔಷಧಿಗಳಿಗೆ ಯಾವುದೇ ಪ್ರಿಸ್ಕಿಪ್ಷನ್ ಬೇಕಾಗಿಲ್ಲ. ನೀವು ಆರಾಮವಾಗಿ ಔಷಧಿ ಅಂಗಡಿಯಲ್ಲಿ ಇದನ್ನು ಖರೀದಿ ಮಾಡ್ಬಹುದು. 

    ಆರೋಗ್ಯ ಸಚಿವಾಲಯ (Ministry Of Health) ದಿಂದ ಮಹತ್ವದ ನಿರ್ಧಾರ : ಆರೋಗ್ಯ ಸಚಿವಾಲಯವು ಔಷಧ ನಿಯಮಗಳು 1945 ಅನ್ನು ತಿದ್ದುಪಡಿ ಮಾಡಲು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಈ ಔಷಧಿಗಳನ್ನು ಕಾಯಿದೆಯ ಶೆಡ್ಯೂಲ್ ಕೆ ಯಲ್ಲಿ ಸೇರಿಸುವ ಸಾಧ್ಯತೆಯಿದೆ.  ಇದರ ನಂತ್ರ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ 15 ಔಷಧಿಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. 

    ಈ ಔಷಧಿಗಳನ್ನು ಮಾರಾಟ ಮಾಡಲು ಷರತ್ತುಗಳು ಅನ್ವಯವಾಗುತ್ತವೆ : ಆದಾಗ್ಯೂ ಈ ಔಷಧಿಗಳ ಮಾರಾಟದಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಔಷಧಿ ಸಂಖ್ಯೆ ಮಾರಾಟದಲ್ಲಿ ಗಮನ ನೀಡಬೇಕಾಗುತ್ತದೆ. ಉದಾಹರಣೆಗೆ, ಚಿಕಿತ್ಸೆ ಅಥವಾ ಬಳಕೆಯ ಗರಿಷ್ಠ ಅವಧಿಯು ಐದು ದಿನಗಳನ್ನು ಮೀರಬಾರದು. ಒಂದು ವೇಳೆ ಐದು ದಿನಗಳಲ್ಲಿ ರೋಗಿ ಗುಣಮುಖನಾಗಿಲ್ಲ, ಮಾತ್ರೆ ಪರಿಣಾಮ ಬೀರಿಲ್ಲ ಎಂದಾದ್ರೆ ಅವನು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಈ ಬಗ್ಗೆ  ಒಂದು ತಿಂಗಳೊಳಗೆ ಸಲಹೆಗಳನ್ನು ನೀಡುವಂತೆ ಆರೋಗ್ಯ ಸಚಿವಾಲಯವು ಮಧ್ಯಸ್ಥಗಾರರಿಗೆ ತಿಳಿಸಿದೆ. ಪ್ರಸ್ತುತ ಔಷಧಿ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆಯೇ ದೊರೆಯುವ ಹಲವು ಔಷಧಗಳು ಇವೆ. ಆದರೆ ಇದೀಗ OTC ಔಷಧಿಗಳಿಗೆ ಯಾವುದೇ ಕಾನೂನು ಜಾರಿಯಾಗುವುದಿಲ್ಲ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss