Friday, March 29, 2024
spot_img
More

    Latest Posts

    ಹೆರಿಗೆ ವೇಳೆ ಮಹಿಳೆ ಸಾವು: ʻವೈದ್ಯರ ಮೇಲಿನ ಕಿರುಕುಳ ನಿಲ್ಲಿಸಿʼ ಎಂದು ಡೆತ್‌ನೋಟ್‌ ಬರೆದು ಆತ್ಮಹತ್ಯೆಗೆ ಶರಣಾದ ಡಾಕ್ಟರ್

    ಜೈಪುರ: ದಯವಿಟ್ಟು ಅಮಾಯಕ ವೈದ್ಯರಿಗೆ ಕಿರುಕುಳ ನೀಡಬೇಡಿ ಎಂದು ಇತ್ತೀಚೆಗೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ ಡಾ. ಅರ್ಚನಾ ಶರ್ಮಾ ಅವರು ಕಣ್ಣೀರಿನ ನುಡಿಗಳನ್ನು ಡೆತ್​ನೋಟ್‌‌ನಲ್ಲಿ ಬರೆದುಕೊಂಡಿದ್ದಾರೆ.

    ದೌಸಾ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಅರ್ಚನಾ ಶರ್ಮಾ ಅವರ ವಿರುದ್ದ ಗರ್ಭಿಣಿ ಮಹಿಳೆಯೊಬ್ಬರ ಸಾವಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಇದರಿಂದ ಮನನೊಂದ ಅರ್ಚನಾ ಮಂಗಳವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ನು ಅರ್ಚನಾ ಡೆತ್​ನೋಟ್​ಗ ಬರೆದಿಟ್ಟಿದ್ದು ಅದರಲ್ಲಿ, ನನ್ನ ಸಾವಿನ ಬಳಿಕ ನನ್ನ ಗಂಡ ಮತ್ತು ಮಕ್ಕಳಿಗೆ ಕಿರುಕುಳ ನೀಡಬೇಡಿ. ಅಲ್ಲದೆ, ಮುಗ್ಧ ವೈದ್ಯರಿಗೆ ಕಿರುಕುಳ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.ನನ್ನ ಸಾವಿನ ಬಳಿಕ ನನ್ನ ಗಂಡ ಮತ್ತು ಮಕ್ಕಳಿಗೆ ಕಿರುಕುಳ ನೀಡಬೇಡಿ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾರನ್ನೂ ಕೊಲೆ ಮಾಡಿಲ್ಲ. ಪ್ರಸವಾನಂತರದ ರಕ್ತಸ್ರಾವ ಒಂದು ಸಮಸ್ಯೆ ಎಂಬುದು ಎಲ್ಲರಿಗೂ ತಿಳಿದಿದೆ. ಇದಕ್ಕಾಗಿ ವೈದ್ಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ನಾನು ಮುಗ್ಧಳು ಎಂಬುದನ್ನು ನನ್ನ ಸಾವು ನಿರೂಪಿಸುತ್ತದೆ. ದಯವಿಟ್ಟು ಅಮಾಯಕ ವೈದ್ಯರಿಗೆ ಕಿರುಕುಳ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.ಇನ್ನು ಅರ್ಚನಾ ಶರ್ಮಾ ಆತ್ಮಹತ್ಯೆಯ ಬೆನ್ನಲ್ಲೇ ದೌಸಾ ಜಿಲ್ಲೆಯ ಲಾಲ್ಸೊಟ್​ ಪೊಲೀಸ್​ ಠಾಣೆಯ ಉಸ್ತುವಾರಿ ಅಧಿಕಾರಿ ಅಂಕಿತ್​ ಚೌಧರಿ ಅವರನ್ನು ಅಮಾನತು ಮಾಡಲಾಗಿದ್ದು, ಅಲ್ಲದೆ ಪ್ರಕರಣವನ್ನು ಸರಿಯಾಗಿ ನಿರ್ವಹಿಸದಿದ್ದಕ್ಕೆ ದೌಸಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರನ್ನು ವಜಾಗೊಳಿಸಲು ರಾಜಸ್ಥಾನ ಸರ್ಕಾರವು ಆದೇಶಿಸಿದೆ ಎಂದು ತಿಳಿದು ಬಂದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss