ಕರ್ನಾಟಕ ರಸ್ತೆ ಸಾರಿಗೆ ನಿಗಮದ “ಗ್ರಾಮಒನ್” ಕಾರ್ಯಕ್ರಮದ ಅಡಿಯಲ್ಲಿ ನಡೆಯುವ ಉಚಿತ ಬಸ್ ಪಾಸ್ ವಿತರಣಾ ಕಾರ್ಯಕ್ರಮ ಪಾವೂರು ಮತ್ತು ಹರೇಕಳ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾಗಮೂಲೆ ಶ್ರೀ ಬಬ್ಬುಸ್ವಾಮಿ ದೇವಸ್ಥಾನದ ವಿಶ್ವಾಸ್ ವೇದಿಕೆ ಯಲ್ಲಿ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಲೆಮಾರಿ ಅರೆಮಾರಿ ನಿಗಮದ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಸಭೆಯನುದ್ದೇಶಿಸಿ ಮಾತನಾಡಿದರು. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಲಯದ ಅಧಿಕಾರಿಯಾದ ರಾಜೇಶ್ ಶೆಟ್ಟಿ ಹಾಗೂ ಡಿಡಿಒ ಮರಿಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮೋಹನ್ ದಾಸ್ ರೈ, ದೆಬ್ಬೇಲಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮಂಗಳೂರು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಬಿಜೆಪಿ ಮುಖಂಡರಾದ ಸುಧಾಕರ್ ಗಟ್ಟಿ, ವಿಎಚ್ ಪಿ ಪ್ರಮುಖರಾದ ಪ್ರಶಾಂತ್ ಕೊಣಾಜೆ, ಹಿರಿಯರಾದ ರಾಮಣ್ಣ ರೈ ಕುಪ್ಪಿಲ, ಚೇತನ್ ಅಸೈಗೋಳಿ, ಶಿವಪ್ರಸಾದ್ ಕೊಣಾಜೆ, ಜಯಪ್ರಕಾಶ್ ಕೊಣಾಜೆ, ಲತಾ ಮಾಣೆ ಹಾಗೂ ಭಗವಾನ್ ದಾಸ್ ಕೊಣಾಜೆ ಉಪಸ್ಥಿತರಿದ್ದರು. ಮುನ್ನೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾದ ಸದಾಶಿವ ಆಚಾರ್ಯ ಹರೇಕಳ ಸ್ವಾಗತಗೈದರು. ವಾಮನ್ ರಾಜ್ ಪಾವೂರು ಕಾರ್ಯಕ್ರಮ ನಿರೂಪಿಸಿದರು.
