ಬೆಂಗಳೂರು:ರಾಜ್ಯದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ 2 ದಿನ ಮೊಟ್ಟೆ/ಬಾಳೆಹಣ್ಣು ವಿತರಣೆಗೆ ಅಧಿಕೃತ ಆದೇಶ ಹೊರಡಿಸಿದೆ. ಆದೇಶದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ/ಶೇಂಗಾ ಚಿಕ್ಕಿ/ಬಾಳೆಹಣ್ಣನ್ನು ವಿತರಿಸಲಾಗುತ್ತಿದ್ದು, ಈಗ ವಾರದಲ್ಲಿ ಎರಡು ದಿವಸ ವಿತರಿಸಲಾಗುವುದು.
ಪ್ರಸಕ್ತ ಸಾಲಿನಿಂದ ಈ ಯೋಜನೆಯನ್ನು ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಿ 280 ಕೋಟಿ ರೂಗಳ ವೆಚ್ಚದಲ್ಲಿ 60 ಲಕ್ಷ ಮಕ್ಕಳಿಗೆ ಒದಗಿಸಲಾಗುವುದು ಅಂತ ತಿಳಿಸಿದೆ..
ಇದೇ ವೇಳೆ ಆದೇಶದಲ್ಲಿ ಕ (2)ರ 2023-24ನೇ ಸಾಲಿನ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಗೆ (ಮಧ್ಯಾಹ್ನ ಉಪಹಾರ ಯೋಜನೆ) ಸಂಬಂಧಿಸಿದ ವಾರ್ಷಿಕ ಕ್ರಿಯಾ ಯೋಜನೆ ಅನುಮೋದನೆ ನೀಡಲಾದ ದಿನಾಂಕ:15.05.2023 ಕೇಂದ್ರ ಸರ್ಕಾರದ ಪಿ.ಎ.ಬಿ. ಸಭಾ ನಡವಳಿಯಲ್ಲಿ Flexibility for New Intervention ಚಟುವಟಿಕೆಗಳಡಿ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಬಳ್ಳಾರಿ, ವಿಜಯನಗರ ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ | ರಿಂದ 8ನೇ ತರಗತಿಯ ಫಲಾನುಭವಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕಾಂಶದ ರೂಪದಲ್ಲಿ (Supplementary Nutrition) 54 ದಿನಗಳಿಗೆ ಮೊಟ್ಟೆ/ಶೇಂಗಾ ಚಿಕ್ಕಿ/ಬಾಳೆಹಣ್ಣನ್ನು ವಿತರಿಸಲು ಒಟ್ಟಾರೆ ರೂ 4426.72 ಲಕ್ಷಗಳಿಗೆ (ಕೇಂದ್ರದ ಪಾಲಿನ ಅನುದಾನ ರೂ 2656.03 ಲಕ್ಷಗಳು + ರಾಜ್ಯದ ಪಾಲಿನ ಅನುದಾನ ರೂ 1770.69 ಲಕ್ಷಗಳು) ಅನುಮೋದನೆ ನೀಡಲಾಗಿರುತ್ತದೆ.
, ಪ್ರಧಾನ ಮಂತ್ರಿ ಘೋಷಣ ಶಕ್ತಿ ನಿರ್ಮಾಣ ಯೋಜನೆ ಇವರ ಪ್ರಸ್ತಾವನೆಯಲ್ಲಿ 2023-24ನೇ ಸಾಲಿನ ಜುಲೈ ಆಯವ್ಯಯ ಭಾಷಣದ ಕಂಡಿಕೆ-91ರಲ್ಲಿ ಘೋಷಿಸಿರುವಂತೆ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ 58,28,564 ವಿದ್ಯಾರ್ಥಿಗಳಿಗೆ, ಒಬ್ಬ ವಿದ್ಯಾರ್ಥಿಗೆ ಒಂದು ದಿನದ ಘಟಕ ವೆಚ್ಚ ರೂ 6/- ರಂತೆ ವಾರದಲ್ಲಿ ಎರಡು ದಿವಸದಂತೆ ಒಟ್ಟು 80 ದಿನಗಳಿಗೆ ಪೂರಕ ಪೌಷ್ಟಿಕಾಂಶದ ರೂಪದಲ್ಲಿ (Supplementary Nutrition) ಮೊಟ್ಟೆ/ಶೇಂಗಾ ಚಿಕ್ಕಿ/ಬಾಳೆಹಣ್ಣನ್ನು ವಿತರಿಸಲು ಅಗತ್ಯವಿರುವ ರೂ 28000.00 ಲಕ್ಷಗಳ ಅನುದಾನವನ್ನು ಭರಿಸಲು ಅನುಮೋದನೆ ನೀಡುವಂತೆ ಕೋರಲಾಗಿದೆ.
ಕ್ರಮಾಂಕ(4)ರ ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ ನೀಡಲಾಗಿರುವ Budget Advice ನಲ್ಲಿ 2023-24ನೇ ಸಾಲಿನ ಜುಲೈ ಆಯವ್ಯಯ ಭಾಷಣದ ಕಂಡಿಕೆ-91ರಲ್ಲಿನ ಘೋಷಣೆಯನ್ನು ಅನುಷ್ಠಾನ ಮಾಡಲು ಅಗತ್ಯವಿರುವ ರೂ 28000.00 ಲಕ್ಷಗಳ ಅನುದಾನವನ್ನು ಕೆಳಕಂಡ ಲೆಕ್ಕ ಶೀರ್ಷಿಕೆಗಳಡಿ ಒದಗಿಸಲಾಗಿರುವ ಅನುದಾನದಿಂದ ಒದಗಿಸಿಕೊಳ್ಳುವಂತೆ ತಿಳಿಸಲಾಗಿದೆ.