Friday, March 31, 2023

BREAKING NEWS: ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ದಿನಾಂಕ ಜೂನ್ 30 ರವರೆಗೆ ವಿಸ್ತರಣೆ

ನವದೆಹಲಿ: ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಗಡುವನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿದೆ. ಮಂಗಳವಾರದ ಅಧಿಸೂಚನೆಯಲ್ಲಿ ಹಣಕಾಸು ಸಚಿವಾಲಯವು...
More

    Latest Posts

    ಕಡಬ: ವಾಟ್ಸಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾದ ಯುವಕ

    ಕಡಬ: ವಾಟ್ಸಪ್ ನಲ್ಲಿ ಸಾಯುವ ಕುರಿತ ಸ್ಟೇಟಸ್ ಹಾಕಿ ಯುವಕನೊರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿ ನಡೆದಿದೆ.

    ನಾಪತ್ತೆಯಾಗಿದ್ದ 8 ವರ್ಷದ ಬಾಲಕನ ಶವ ನಿರ್ಜನ ಪ್ರದೇಶದಲ್ಲಿ ಪತ್ತೆ ; ಕೊಲೆ ಶಂಕೆ

    ಹುಬ್ಬಳ್ಳಿ: ಪಾಳು ಬಿದ್ದ ನಿರ್ಜನ ಜಾಗದಲ್ಲಿ ಎಂಟು ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದ್ದ ಘಟನೆ ಹುಬ್ಬಳ್ಳಿಯ ದೊಡ್ಡ ಮನಿ ಕಾಲೊನಿಯಲ್ಲಿ ನಡೆದಿದ್ದು, ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

    BIGG NEWS : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : ನಾಲ್ವರು ‘IAS’ ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ...

    BIG NEWS; ‘SSLC’ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ : ಸೋಶಿಯಲ್ ಮೀಡಿಯಾದಲ್ಲಿ ವೈರಲ್

    ಕಲಬುರಗಿ : ಇಂದಿನಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ ಆರಂಭವಾಗಿದ್ದು, ಇಂದು ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆಯುತ್ತಿದೆ. ಇದರ ನಡುವೆ...

    ಕಾರ್ಕಳ: ಅಜೆಕಾರಿನಲ್ಲಿ 14ನೇ ಶತಮಾನದ ಶಿಲಾ ಶಾಸನ ಪತ್ತೆ

    ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಗಾಣದಬೆಟ್ಟು ಎಂಬಲ್ಲಿ 14ನೇ ಶತಮಾನದ ವೈಷ್ಣವ ಪಂಥದ ಶಿಲಾ ಶಾಸನ ಪತ್ತೆಯಾಗಿದೆ ಗಾಣದಬೆಟ್ಟು ಅಮ್ಮು ಶೆಟ್ಟಿ ಎಂಬುವರ ಜಾಗದಲ್ಲಿ ಈ ಶಾಸನ ಪತ್ತೆಯಾಗಿದ್ದು ಇದು ಸುಮಾರು 1409 ಇಸವಿಯದ್ದಾಗಿರಬಹುದೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

    ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಎಸ್ಎ ಕೃಷ್ಣಯ್ಯ ಹಾಗೂ ಕಡಿಯಾಳಿ ಯು. ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಕೆ ಶ್ರೀಧರ ಭಟ್ ಇವರ ಮಾರ್ಗದರ್ಶನದಲ್ಲಿ ಫ್ಲೀಚ್ ಇಂಡಿಯಾ ಫೌಂಡೇಶನ್ ಹೈದರಾಬಾದ್ ಇದರ ಸಹಾಯಕ ಸಂಶೋಧಕ ಶ್ರುತೇಶ್ ಆಚಾರ್ಯ ಶಿಲಾಶಾಸನವನ್ನು ಓದಿ ಅಧ್ಯಯನ ನಡೆಸಿದ್ದಾರೆ.

    ಶಿಲಾ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರ ಹಾಗೂ ಶಂಖ ಚಕ್ರಗಳ ಕೆತ್ತನೆಯನ್ನು ಕೆತ್ತಲಾಗಿದೆ ಇದು ವೈಷ್ಣವ ಪಂಥದ ಶಿಲಾ ಶಾಸನ ವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

    1409 ಇಸವಿಯ ನವಂಬರ್ 7 ರ ಗುರುವಾರದಂದು ಇದನ್ನು ಸ್ಥಾಪಿಸಿರಬಹುದೆಂದು ಊಹಿಸಲಾಗಿದೆ .ಈ ಶಾಸನದಲ್ಲಿ 14ನೇ ಶತಮಾನದ ಕನ್ನಡವನ್ನು ಬಳಕೆ ಮಾಡಲಾಗಿದ್ದು ಇದು ವಿಜಯನಗರ ಕಾಲದ ಕನ್ನಡ ಲಿಪಿಯನ್ನು ಹೋಲುತ್ತದೆ.

    ಈ ಶಾಸನದಲ್ಲಿ 10 ಸಾಲುಗಳನ್ನು ಬರೆಯಲಾಗಿದೆ. ಸುಮಾರು ಮೂರು ಅಡಿ ಎತ್ತರ ಎರಡು ಅಡಿ ಅಗಲ ಹೊಂದಿರುವ ಶಾಸನವು ಗ್ರಾನೈಟ್ ಕಲ್ಲಿನಿಂದ ಕೊರೆಯಲ್ಪಟ್ಟಿದೆ. ಈ ಶಾಸನದಲ್ಲಿ ಶಕ ವರುಷ1331ನೇ ಮಾರ್ಗಶಿರ ಶುದ್ಧ೧ ಗುರುವಾರ ಅಂದರೆ ಇತಿಹಾಸ ಸಂಶೊಧಕರ ಲೆಕ್ಕಾಚಾರದ ಪ್ರಕಾರ 1409ನೇ ಇಸವಿಯ ವಿರೋಧಿ ಸಂವತ್ಸರದ ನವೆಂಬರ್ 7 ಗುರುವಾರದ ದಿನಕ್ಕೆ ಸರಿಹೊಂದುತ್ತದೆ.

    ಈ ಶಾಸನದಲ್ಲಿ ಮಂಣ್ಣೆ( ಪ್ರಸ್ತುತ ಮರ್ಣೆ ಗ್ರಾಮ)ಯ ಆಜಕಾರ ವಿಷ್ಣು ದೇವರ ದೀವಿಗೆಗೆ ಕಾತು ಮೂಲಿಗ(ಮೊಯ್ಲಿ ಸಮುದಾಯ ಇರಬಹುದು) ಎಂಬವರು ಬೆಟ್ಟಿಂ ಪ್ರದೇಶದಿಂದ (ಗಾಣದಬೆಟ್ಟು) ಎಣ್ಣೆಯನ್ನು ಮತ್ತು 11 ತೆಂಗಿನಕಾಯಿಗಳನ್ನು ದಾನವಾಗಿ(ಉಂಬಳಿ) ಬಿಟ್ಟಿರುವ ಕುರಿತು ಶಾಸನದಲ್ಲಿ ಉಲೇಖವಾಗಿದೆ. ಈ ಶಾಸನವು ಪತ್ತೆಯಾಗಿರುವ ಸಮೀಪದಲ್ಲಿ ಪುರಾತನ ವಿಷ್ಣುಮೂರ್ತಿ ದೇವಸ್ಥಾನವಿದ್ದು ಶಾಸನದಲ್ಲಿ ದೇವಸ್ಥಾನದ ಉಲ್ಲೇಖವಿದ್ದು ಭಾರೀ ಮಹತ್ವ ಪಡೆದುಕೊಂಡಿದೆ.

    Latest Posts

    ಕಡಬ: ವಾಟ್ಸಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾದ ಯುವಕ

    ಕಡಬ: ವಾಟ್ಸಪ್ ನಲ್ಲಿ ಸಾಯುವ ಕುರಿತ ಸ್ಟೇಟಸ್ ಹಾಕಿ ಯುವಕನೊರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿ ನಡೆದಿದೆ.

    ನಾಪತ್ತೆಯಾಗಿದ್ದ 8 ವರ್ಷದ ಬಾಲಕನ ಶವ ನಿರ್ಜನ ಪ್ರದೇಶದಲ್ಲಿ ಪತ್ತೆ ; ಕೊಲೆ ಶಂಕೆ

    ಹುಬ್ಬಳ್ಳಿ: ಪಾಳು ಬಿದ್ದ ನಿರ್ಜನ ಜಾಗದಲ್ಲಿ ಎಂಟು ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದ್ದ ಘಟನೆ ಹುಬ್ಬಳ್ಳಿಯ ದೊಡ್ಡ ಮನಿ ಕಾಲೊನಿಯಲ್ಲಿ ನಡೆದಿದ್ದು, ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

    BIGG NEWS : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : ನಾಲ್ವರು ‘IAS’ ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ...

    BIG NEWS; ‘SSLC’ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ : ಸೋಶಿಯಲ್ ಮೀಡಿಯಾದಲ್ಲಿ ವೈರಲ್

    ಕಲಬುರಗಿ : ಇಂದಿನಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ ಆರಂಭವಾಗಿದ್ದು, ಇಂದು ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆಯುತ್ತಿದೆ. ಇದರ ನಡುವೆ...

    Don't Miss

    ಕುಂದಾಪುರ: ಸರಣಿ ರಸ್ತೆ ಅಪಘಾತ – ಓರ್ವ ಸಾವು

    ಕುಂದಾಪುರ: ಇಲ್ಲಿನ ಕುಂಭಾಶಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು ಓರ್ವ ಸಾವಿಗೀಡಾಗಿ ಮತ್ತೋರ್ವ ಗಾಯಗೊಂಡ ಘಟನೆ ಸಂಭವಿಸಿದೆ. ಕುಂಭಾಶಿಯ ಪಾಕಶಾಲಾ ಹೊಟೇಲ್ ಸಮೀಪ ಹೋಂಡಾ ಡಿಯೋ...

    ನವದೆಹಲಿ: ಅಂಗಾಂಗ ದಾನ ಶ್ರೇಷ್ಠ ಕಾರ್ಯ- ಪ್ರಧಾನಿ ಮೋದಿ

    ನವದೆಹಲಿ: ಅಂಗಾಂಗ ದಾನದಂಥ ಮಾನವೀಯ ಕೆಲಸ ಮಾಡಬೇಕು ಎಂದು ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಅಲ್ಲದೇ ‘ಈ ನಿಟ್ಟಿನಲ್ಲಿ ನಮ್ಮ ಏಕರೂಪ ನೀತಿಯನ್ನು ರೂಪಿಸುತ್ತಿದ್ದು, ಅಂಗಾಂಗ ದಾನ...

    ಮಾಂತ್ರಿಕನ ಮಾತು ಕೇಳಿ 10 ವರ್ಷದ ಬಾಲಕನನ್ನು ಬಲಿ ಪಡೆದ ಮೂವರು ಅರೆಸ್ಟ್

    ಉತ್ತರ ಪ್ರದೇಶ: 10 ವರ್ಷದ ಬಾಲಕನನ್ನು ಮಾಂತ್ರಿಕನೊಬ್ಬ ನರಬಲಿ ಕೊಡುವಂತೆ ಹೇಳಿ ಕೊಂದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪರ್ಸಾ...

    ಬಂಟ್ವಾಳ: ನೇತ್ರಾವತಿ‌ ನದಿಗೆ ಹಾರಿ ಪುತ್ತೂರಿನ ಯುವಕ ಆತ್ಮಹತ್ಯೆ..!

    ಬಂಟ್ವಾಳ: ನೇತ್ರಾವತಿ‌ ನದಿಗೆ ಹಾರಿ ಪುತ್ತೂರಿನ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಠ್ಠಲ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್(32) ಆತ್ಮಹತ್ಯೆ ಮಾಡಿಕೊಂಡವರು.

    BREAKING NEWS: ಕೊಚ್ಚಿಯಲ್ಲಿ ಟೇಕ್ ಆಫ್ ಆದ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ

    ಕೊಚ್ಚಿ: ಇಲ್ಲಿನ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ( Nedumbassery airport ) ಭಾನುವಾರ ಭಾರತೀಯ ಕೋಸ್ಟ್ ಗಾರ್ಡ್ (Indian Coast Guard - ICG) ಹೆಲಿಕಾಪ್ಟರ್ ಟೇಕ್ ಆಫ್ ಆಗುವ...