ಮಂಗಳೂರು: ತುಳುನಾಡು ವನಸ್ಪತಿಗಳ ನಾಡು ದಯಾನಂದ ಕತ್ತಲ್ ಸರ್ ಮಾನಸಿಕ ಮತ್ತು ದೈಹಿಕ ವ್ಯಾಧಿಗಳಿಗೆ ತುಳುವ ನೆಲದಲ್ಲಿ ವಿಶೇಷವಾದಂತಹ ಮತ್ತು ಮೂಲಿಕೆಗಳು ನಮ್ಮ ಹಿರಿಯರು ಪ್ರಕೃತಿಯಿಂದಲೇ ಕಂಡುಕೊಂಡಿದ್ದಾರೆ.

ಅದರಲ್ಲೂ ತುಳುನಾಡಿನಲ್ಲಿ ಆಶಾಡ ತಿಂಗಳಲ್ಲಿ 31 ದಿನದಲ್ಲಿ 16 ವಿಧದ ಕಷಾಯವನ್ನು ಚಿಗುರು ಮತ್ತು ತೊಗಟೆಗಳಿಂದ ಇಲ್ಲಿನ ಪ್ರತಿ ಮನೆಯಲ್ಲೂ ತಯಾರು ಮಾಡಿ ಮಕ್ಕಳಿಂದ ಹಿಡಿದು ಅಬಾಲ ವೃದ್ಧರವರೆಗೂ ಕಷಾಯವನ್ನು ಸ್ವೀಕರಿಸುತ್ತಿದ್ದರು ಕಷಾಯವನ್ನು ಕುಡಿದು ಕ್ರಷವಾದ ಶರೀರಕ್ಕೆ ಧಾತು ಪುಷ್ಟಿಯನ್ನು ನೀಡುವ ತಿಂಡಿ ಖಾದ್ಯಗಳನ್ನು ಕಡುಬುಗಳನ್ನು ತಯಾರಿಸಿ ತಿನ್ನುತ್ತಿದ್ದರು ಅಂತಹ ಕಷಾಯಗಳಲ್ಲಿ ಆಟಿ ಅಮಾವಾಸ್ಯೆಯ ದಿನದಂದು ಬ್ರಾಹ್ಮಿ ಮುಹೂರ್ತಕ್ಕೆ ಸಪ್ತಪರಣಿ ಅಂದರೆ ಹಾಳೆಮರದ ತೊಗಟೆಯನ್ನು ಕಲ್ಲಿನಿಂದ ಶುದ್ಧೀಕರಿಸಿ ಅದನ್ನು ಜಡಿದು ರಸ ಹಿಂಡಿ ಅದಕ್ಕೆ ಕಾದ ಬಿಳಿ ಬೆನಚು ಕಲ್ಲು ಅದು ಕೂಡ ಕಟ್ಟಿಗೆಯನ್ನು ಉರಿಸಿದ ಬೆಂಕಿಯಲ್ಲಿ ಅದನ್ನು ಕಾಸಬೇಕು ಇದು ಕಷಾಯವಾಗಿ ವರ್ಷದ ಪೂರ್ತಿ ನಮ್ಮ ಶರೀರವನ್ನು ರೋಗಮುಕ್ತವಾಗಿ ಇಡಲು ಸಹಕರಿಸುತ್ತದೆ ಎನ್ನುವ ನಂಬಿಕೆಯೂ ಹೌದು, ಸತ್ಯವೂ ಹೌದು ಅಸ್ಟೋರಿಯಾ ಕಾಲರಿ ಸಂಸ್ಕೃತದಲ್ಲಿ ಸಪ್ತಪರಣಿ ಎನ್ನುವ ಹೆಸರಿರುವ ಧರ್ಮ ನೇಮೋತ್ಸವದ ಚತುಷ್ತಂಬ ಈ ಹಾಳೆಮರದ್ದೆ ಆಗಬೇಕು ಮದುವೆ ಮುಂಜಿಯ ಮುಹೂರ್ತ ಕಂಬ ತೋರಣ ಇದು ಈ ಹಾಳೆ ಮರದಿಂದಲೇ ಆಗಬೇಕು ಹಿಂದಿನ ಅಂತಸ್ತಿನ ಮನೆಗಳಿಗೆ ದೇವಸ್ಥಾನ ದೈವಸ್ಥಾನಗಳಿಗೆ ಮಠ ಮಂದಿರಗಳ ಮುಂದೆ ಹಾಳೆ ಮರ ಸಿಡಿಲು ನಿರೋಧಕವಾಗಿ ಕೆಲಸ ನಿರ್ವಹಿಸುತ್ತದೆ ಇಂತಹ ದೇವ ವೃಕ್ಷ ಹಾಳೇಮರ ಇದನ್ನು ಡೆವಿಲ್ ಟ್ರೀ ಎಂದು ಆಂಗ್ಲರು ಡಿಕ್ಷನರಿಯಲ್ಲಿ ನಮೂದಿಸಿರುವುದು ಬಹಳ ನೋವಿನ ಖೇದಕರ ವಿಷಯ ಎಂದು ದಯಾನಂದ ಕತ್ತಲ್ ಸರ್ ಅವರು ತುಳು ಸಾಹಿತ್ಯ ಅಕಾಡೆಮಿ ಡಿಂಕಿ ಡೈನ್ ಹೋಟೆಲ್ ತುಳುವ ಬೊಳ್ಳಿ ಪ್ರತಿಷ್ಠಾನ ಸಹಕಾರದೊಂದಿಗೆ ನಡೆಸಿರುವ ಉಚಿತ ಕಷಾಯ ಮೆಂತೆ ಗಂಜಿ ಹಂಚುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸೋನಾ ಕ್ಯಾಟರಿಂಗ್ ಮಾಲಕರಾದ ಗಣೇಶ್ ಕಾಮತ್, ಮಂಗಳೂರು ವಿಶ್ವವಿದ್ಯಾನಿಲಯದ ಧರ್ಮಸ್ಥಳ ತುಳು ಪೀಠದ ನಿರ್ದೇಶಕರಾದ ಡಾ. ಮಾಧವ, ಹಿರಿಯ ಸಾಹಿತಿಗಳಾದ ಭಾಸ್ಕರ್ ರೈ ಕುಕ್ಕುವಲ್ಲಿ, ಡಿಂಕಿ ಡೈನ್ ಮಾಲಕರಾದ ಸ್ವರ್ಣ ಸುಂದರ್, ಸನಾತನ ನಾಟ್ಯಾಲಯದ ಶ್ರೀ ಚಂದ್ರಶೇಖರ ಶೆಟ್ಟಿ, ಅಂತರರಾಷ್ಟ್ರೀಯ ಜಾದುಗಾರರಾದ ಶ್ರೀ ಕುದ್ರೋಳಿ ಗಣೇಶ್, ಜೋಗಿ ಸಮಾಜದ ಅಧ್ಯಕ್ಷರಾದ ಕಿರಣ್ ಜೋಗಿ , ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು, ತುರವೇ ಯುವ ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ,


ತುಳುವ ಬೊಳ್ಳಿ ಪ್ರತಿಷ್ಠಾನದ ಯಾದವಕೋಟ್ಯಾನ್ ರೋಷನ್ ತುಳುವೆರ್ ಕುಡ್ಲ ಪ್ರತೀಕ್ ಯು ಪೂಜಾರಿ ಜಯಕಿರಣ ಪತ್ರಿಕೆಯ ಮಾಲಕರಾದ ಪ್ರಕಾಶ್ ಪಾಂಡೇಶ್ವರ ಇನ್ನಿತರರು ಉಪಸ್ಥಿತರಿದ್ದರು ನಿರೂಪಕರಾದ ಸಾಹಿಲ್ ರೈ ನಿರೂಪಿಸಿದರು ಸ್ವರ್ಣ ಸುಂದರ್ ವಂದಿಸಿದರು 2000 ಮಂದಿ ಕಷಾಯ ಮತ್ತು ಗಂಜಿಯನ್ನು ಸ್ವೀಕರಿಸಿದರು ಮತ್ತು ಪುತ್ತೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ಇವರಿಗೆ ಮೌನ ಪ್ರಾರ್ಥನೆಯ ಶ್ರದ್ಧಾಂಜಲಿ ಸಮರ್ಪಿಸಲಾಯಿತು.




