ಕಾರ್ಕಳ :ಬಸ್ ಹತ್ತುವ ವೇಳೆ ವೃದ್ಧರೊಬ್ಬರು ಕೈಜಾರಿ ರಸ್ತೆಗೆ ಬಿದ್ದು, ಬಸ್ ನ ಹಿಂಬದಿ ಚಕ್ರ ಅವರ ಕಾಲ ಮೇಲೆ ಹರಿದ ದಾರುಣ ಘಟನೆ ತಾಲೂಕಿನ ಹಿರ್ಗಾನ ಬಸ್ ನಿಲ್ದಾಣ ಬಳಿ ಇಂದು ನಡೆದಿದೆ.
ಹಿರ್ಗಾನ ಚಿಕ್ಕಲ್ಬೆಟ್ಟಿನ ಕಣಿಲ ನಿವಾಸಿ ಕೃಷ್ಣ ನಾಯಕ್ ಗಾಯಗೊಂಡ ವ್ಯಕ್ತಿ.
ಇವರು ಹಿರ್ಗಾನದಿಂದ ನೆಲ್ಲಿಕಟ್ಟೆಗೆ ಹೋಗಲು ಖಾಸಗಿ ಬಸ್ ಗೆ ಹತ್ತುತಿದ್ದರು. ಈ ವೇಳೆ ಕೈ ಜಾರಿ ರಸ್ತೆಗೆ ಬಿದ್ದಿದ್ದು, ಬಸ್ ನ ಹಿಂದಿನ ಚಕ್ರವು ಅವರ ಕಾಲಿನ ಮೇಲೆ ಹರಿದಿದೆ ಎನ್ನಲಾಗಿದೆ.ಇದರಿಂದ ಅವರ ಕಾಲು ಜಖಂ ಆಗಿದ್ದು, ವಿಪರೀತ ರಕ್ತಸ್ರಾವವಾಗಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.