ಉಪ್ಪಿನಂಗಡಿ: ಜೀಪು ಚಲಾಯಿಸಿಕೊಂಡು ಬಂದು ನಿಲ್ಲಿಸುತ್ತಿದ್ದಂತೆಯೇ ಹೃದಯಸ್ತಂಭನಕ್ಕೆ ಒಳಗಾಗಿ ಚಾಲಕ ಅಸುನೀಗಿದ ಘಟನೆ ನಡೆದಿದೆ.
ಕೊಯಿಲ ಗ್ರಾಮದ ವಿಶ್ವನಾಥ ಗೌಡ ಎಂಬವರು ಉಪ್ಪಿನಂಗಡಿಯ ಆಸ್ಪತ್ರೆ ಬಳಿ ಜೀಪು ನಿಲ್ಲಿಸುತ್ತಿದ್ದಂತೆಯೇ ಹೃದಯಸ್ತಂಭನಕ್ಕೆ ತುತ್ತಾಗಿ ನಿಧನರಾಗಿದ್ದಾರೆ.
ಕಡಬ ತಾಲೂಕು ಕೊಯಿಲ ಗ್ರಾಮದ ಒಳಕಡಮ ನಿವಾಸಿ ವಿಶ್ವನಾಥ ಗೌಡ (50) ಮೃತಪಟ್ಟ ಜೀಪು ಚಾಲಕ
ತಮ್ಮ ಜೀಪನ್ನು ದುರಸ್ತಿಗೊಳಪಡಿಸಿ ಹೊಸ ಬಣ್ಣ ಬಳಿದು ಅದರ ವಯರಿಂಗ್ ಬದಲಾಯಿಸಲು ಗ್ಯಾರೇಜೊಂದರಲ್ಲಿ ಮಾತುಕತೆ ನಡೆಸಿದ್ದರು. ಅನಂತರ ಉಪ್ಪಿನಂಗಡಿಯ ಖಾಸಗಿ ನರ್ಸಿಂಗ್ ಹೋಂ ಬಳಿ ಜೀಪನ್ನು ನಿಲ್ಲಿಸುತ್ತಿದ್ದಂತೆಯೇ ಹೃದಯ ಸ್ತಂಭನಕ್ಕೆ ತುತ್ತಾಗಿ ಜೀಪಿನಲ್ಲೇ ಮೃತಪಟ್ಟಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.