ಹುಬ್ಬಳ್ಳಿ: ತಾಲೂಕಿನ ಹೆಬಸೂರ ಗ್ರಾಮದಲ್ಲಿ 15 ವರ್ಷದ ಅಪ್ರಾಪ್ತಿಯೊಂದಿಗೆ ವಿವಾಹ ನಡೆಸಿದ ಆರೋಪದಡಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ
ಹೆಬಸೂರ ಗ್ರಾಮದ ಗೂಳಪ್ಪ ಕುರಬರ, ಹನಮಂತಪ್ಪ ಕುರಬರ ಹಾಗೂ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಸಿದ್ದಪ್ಪ ಮೀನಾಪಟ್ಟಿ ಬಂಧಿತ ಆರೋಪಿಗಳು. ಹಿರೇನರ್ತಿ ಗ್ರಾಮದ ಅಪ್ರಾಪ್ತೆ ಜೊತೆಗೆ ಗೂಳಪ್ಪ ಕುರಬರ ವಿವಾಹ ನಡೆದಿತ್ತು. ಈ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಹಿರಿಯ ಮೇಲ್ವಿಚಾರಕಿ ಶೈಲಜಾ ಅರಕೇರಿ ಎಂಬುವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್‌ಸ್ಪೆಕ್ಟರ್ ರಮೇಶ ಗೋಕಾಕ, ಪಿಎಸ್‌ಐ ಡಿ.ಚಾಮುಂಡೇಶ್ವರಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
