ಪಡುಬಿದ್ರೆ: ಸುರತ್ಕಲ್ ನಲ್ಲಿ ಕೊಲೆಯಾದ ಮಹಮ್ಮದ್ ಫಾಝಿಲ್ ನನ್ನು ಕೊಲೆಗೈಯಲು ಆರೋಪಿಗಳು ಬಳಸಿದ್ದ ಕಾರು ಪಡುಬಿದ್ರೆ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.ಇದೀಗ ಬಲ್ಲ ಪೊಲೀಸ್ ಮೂಲಗಳು ಇದನ್ನು ಖಚಿತಪಡಿಸಿವೆ.ಕಾರ್ಕಳ ತಾಲೂಕು ವ್ಯಾಪ್ತಿಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಬಳಿ ಬಣ್ಣದ ಇಯಾನ್ ಕಾರು ಪತ್ತೆಯಾಗಿದ್ದು ಸದ್ಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಕಾರ್ ನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು ಮೈಕ್ರೋ ಸಿಮ್ ಕಾರ್ಡ್ ಕೂಡ ಸಿಕ್ಕಿದೆ ಎನ್ನಲಾಗಿದೆ.ಇದೀಗ ಮಂಗಳೂರಿನಿಂದ ಬೆರಳಚ್ಚು ತಜ್ಞ ರು ಮತ್ತು ಎಫ್ ಎಸ್ ಎಲ್ ತಜ್ಞರು ಇಲ್ಲಿಗೆಬರಬೇಕಿದೆ.ಭಾನುವಾರವಾಗಿದ್ದರಿಂದ ತುಸು ತಡವಾಗಬಹುದು ಎನ್ನಲಾಗಿದೆ.ಇದೀಗ ಕಾರನ್ನು ಟರ್ಪಾಲ್ ನಿಂದ ಮುಚ್ಚಲಾಗಿದ್ದು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.