Saturday, April 20, 2024
spot_img
More

    Latest Posts

    ದೇರಡ್ಕ – ಶಿರಿಯಾ ಅಣೆಕಟ್ಟು ರಸ್ತೆ ಶೋಚನೀಯ ಸ್ಥಿತಿ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ

    ಪೆರ್ಲ: ದೇರಡ್ಕ -ಶಿರಿಯಾ ಅಣೆಕಟ್ಟು ರಸ್ತೆ ಹದಗೆಟ್ಟು ವರ್ಷಗಳೇ ಕಳೆದಿದ್ದು ಈ ಬಗ್ಗೆ ಮಂಜೂರುಗೊಂಡ ಗ್ರಾಮ ಸಡಕ್ ಯೋಜನೆಯು ಸಾಕಾರಗೊಳ್ಳದೆ ಮೂಲೆಗುಂಪಾಗಿದೆ ಎಂದು ಆರೋಪಿಸಿ ಸ್ಥಳೀಯರು ಒಟ್ಟಾಗಿ ಜನಕೀಯ ಸಮಿತಿಯ ಮೂಲಕ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.


    ಈ ರಸ್ತೆ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸೇರಿಸಿ ಮೂರು ವರ್ಷಗಳೇ ಕಳೆದಿದ್ದರೂ ಈ ವರೆಗೆ ಕಾಮಗಾರಿ ನಡೆಸಲು ಮುಂದಾಗಿಲ್ಲ.ಈ ರಸ್ತೆಯ ಶೋಚನೀಯ ಸ್ಥಿತಿಯಿಂದಾಗಿ ಈ ರಸ್ತೆಯಿಂದ ಶಾಲಾ ಬಸ್ ಬಾರದೆ ಮಕ್ಕಳಿಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ, ರಿಕ್ಷಾ ಸಹಿತ ಬಾಡಿಗೆ ವಾಹನಗಳು ಈ ಭಾಗದಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದು ವಯೋವೃದ್ಧರು, ರೋಗಿಗಳು ಪರದಾಡುವಂತಾಗಿದೆ.ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಎದ್ದು ಅಲ್ಲಿಯೇ ರಾಶಿ ಬಿದ್ದಿರುವ ಕಾರಣ ದ್ವಿಚಕ್ರ ವಾಹನ ಸವಾರರು ನಿತ್ಯ ಆಪಾಯ ಎದುರಿಸುತ್ತಿದ್ದಾರೆ.

    ಇದನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಅಣೆಕಟ್ಟು ಬಳಿಯಿಂದ ಮಣಿಯಂಪಾರೆ ರಸ್ತೆಯ ವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಲಾಗಿತ್ತು ಬಳಿಕ ನಡೆದ ಪ್ರತಿಭಟನಾ ಸಭೆಯನ್ನು ಮಂಜೇಶ್ವರ ಬ್ಲೋಕ್ ಪಂಚಾಯತು ಸದಸ್ಯ ಕೆ.ಪಿ.ಅನಿಲ್‌ಕುಮಾರ್‌ ಉದ್ಘಾಟಿಸಿದರು. ಊರಿನ ನಾಗರಿಕರಾದ ಡಾ.ನಾರಾಯಣ ನಾಯ್ಕ್, ಬಿಜೆಪಿ ಪುತ್ತಿಗೆ ಪಂಚಾಯತ್ ಸಮಿತಿ ಕಾರ್ಯದರ್ಶಿ ಅತುಲ್ ಕೃಷ್ಣನಾಯಕ್, ಬಿಜೆಪಿ ಕುಂಬಳೆ ಮಂಡಲ ಪ್ರ.ಕಾರ್ಯದರ್ಶಿ ಸ್ವಾಗತ್ ಸೀತಾಂಗೋಳಿ,ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಲ್ಲಡ್ಕ, ಕಾರ್ಯದರ್ಶಿ ಗಂಗಾಧರ ಕಲ್ಲಡ್ಕ, ಸುರೇಶ ಕೆದ್ರೋಳಿ, ಗೋಪಾಲಕೃಷ್ಣ ನಾಯ್ಕ, ನಾರಾಯಣ ನಾಯ್ಕ, ರಮೇಶ ಪೊಯ್ಯೆ, ಗಂಗಾಧರ ಪೊಯ್ಯೆ, ಪ್ರೇಮಲತಾ ಕೆದ್ರೋಳಿ, ಶೋಭಾ ಸಂಟನಡ್ಕ, ಮಾಲತಿ ನೆಕ್ಕರೆ ಪದವ್, ರಂಜಿತ್, ನವೀನ್, ನಿತೇಶ್ ಮೊದಲಾದವರು ಭಾಗವಹಿಸಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss