Saturday, April 20, 2024
spot_img
More

    Latest Posts

    ರೈಲಿನಲ್ಲೇ ಹೆರಿಗೆ ಮಾಡಿಸಿದ ವೈದ್ಯಕೀಯ ವಿದ್ಯಾರ್ಥಿನಿ: ತಾಯಿ-ಮಗು ಕ್ಷೇಮ!

    ಆಂಧ್ರಪ್ರದೇಶ: ತುಂಬು ಗರ್ಭಿಣಿಯೋರ್ವರಿಗೆ ರೈಲು ಪ್ರಯಾಣದಲ್ಲಿರುವಾಗಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಸಿಕಂದರಾಬಾದ್ ದುರಂತೋ ಎಕ್ಸ್‌ ಪ್ರೆಸ್ ರೈಲಿನಲ್ಲಿ ನಿನ್ನೆ ನಡೆದಿದೆ.

    ಈ ವೇಳೆ ಪ್ರಸವಕ್ಕೆ ವೈದ್ಯಕೀಯ ವಿದ್ಯಾರ್ಥಿನಿಯೋರ್ವರು ಸಹಾಯ ಮಾಡಿ ಪರೋಪಕಾರ ಮೆರೆದಿದ್ದಾರೆ. ಶ್ರೀಕಾಕುಳಂ ಮೂಲದ ಗರ್ಭಿಣಿ ಸಿಕಂದರಾಬಾದ್ ದುರಂತೋ ಎಕ್ಸ್‌ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರೈಲು ಅನಕಾಪಲ್ಲಿ ನಿಲ್ದಾಣಕ್ಕೆ ಸಮೀಪದಲ್ಲಿರುವಾಗ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಇದನ್ನು ನೋಡಿದ ಅದೇ ಕೋಚ್‌ನಲ್ಲಿದ್ದ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮಹಿಳೆಗೆ ಸಹಾಯ ಮಾಡಲು ಮುಂದಾಗಿ ಕೂಡಲೇ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ರೈಲು ನಿಂತ ಕೂಡಲೇ ಸಹ ಪ್ರಯಾಣಿಕರು ಮತ್ತು ಕುಟುಂಬಿಕರು ಮಾಹಿತಿ ನೀಡಿದುದರಿಂದ ಅಧಿಕಾರಿಗಳು ಕೂಡಾ ಆಗಮಿಸಿದ್ದಾರೆ. ಪ್ರಯಾಣದ ವೇಳೆ ಹೆರಿಗೆಗೆ ಸಹಕರಿಸಿದ ವಿದ್ಯಾರ್ಥಿನಿಗೆ ಮಹಿಳೆಯ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss