Thursday, April 18, 2024
spot_img
More

    Latest Posts

    ದೆಹಲಿ ಅಗ್ನಿ ದುರಂತ: 27 ಮಂದಿ ಸಜೀವ ದಹನ

    ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ನಡೆದ ಅಗ್ನಿ ದುರಂತರದಲ್ಲಿ ಕ್ರೇನ್​ ಚಾಲಕರೊಬ್ಬರು ಸುಮಾರು 50 ಜನರ ಪಾಲಿಗೆ ಆಪದ್ಬಾಂಧವರಾಗಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ತಡವಾಗಿ ಬಂದ ಆರೋಪದ ನಡುವೆ ಈ ಚಾಲಕ ಬಹುತೇಕ ಮಹಿಳೆಯರು ಸೇರಿದಂತೆ 50 ಜನರನ್ನು ರಕ್ಷಣೆ ಮಾಡಿದ್ದಾರೆ.

    ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಬಿದ್ದು 27 ಜನರು ಸಜೀವ ದಹನವಾಗಿದ್ಧಾರೆ. ಅಂದು ಕಟ್ಟಡದಲ್ಲಿ ಬೆಂಕಿ ನೋಡಿದ ಕ್ರೇನ್​ ಚಾಲಕ ದಯಾನಂದ ತಿವಾರಿ ತಮ್ಮ ಕ್ರೇನ್​ ಸಹಾಯದಿಂದಲೇ ಜನರನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಅಂದಿನ ಘಟನೆ ಬಗ್ಗೆ ಮಾತನಾಡಿರುವ ಅವರು, ಬೆಂಕಿಯ ಕೆನ್ನಾಲಿಗೆ ಹೆಚ್ಚಾಗದಿದ್ದರೆ ಇನ್ನೂ ಕೆಲ ಜನರನ್ನು ಉಳಿಸಬಹುದಿತ್ತು ಎಂದು ಮರುಕ ಪಟ್ಟಿದ್ದಾರೆ.

    ಕ್ರೇನ್​ನ ಮಾಲೀಕ ಮತ್ತು ಹೆಲ್ಪರ್​ ಸಮೇತವಾಗಿ ಬರುತ್ತಿದ್ದಾಗ ಕಟ್ಟಡಕ್ಕೆ ಬೆಂಕಿ ಬಿದ್ದಿರುವುದನ್ನು ಗಮನಿಸಿದೆ. ಇಡೀ ಅರ್ಧ ಕಟ್ಟಡ ಹೊತ್ತಿ ಉರಿಯುತ್ತಿತ್ತು. ಆಗ ಕ್ರೇನ್​ನ ಮೂಲಕ ಜನರನ್ನು ರಕ್ಷಣೆ ಮಾಡಲಾಯಿತು. ನಮ್ಮ ಮಾಲೀಕರು ಸಹ ಸ್ಥಳದಲ್ಲೇ ಇದ್ದರು. ನಾವು ರಕ್ಷಣೆ ಮಾಡಿದವರಲ್ಲಿ ಬಹುಪಾಲು ಮಹಿಳೆಯರೇ ಆಗಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.

    ಡಿಎನ್​ಎ ಪರೀಕ್ಷೆ: ಈ ದುರ್ಘಟನೆಯಲ್ಲಿ ಮೃತಪಟ್ಟ 27 ಜನರ ಪೈಕಿ ಇದುವರೆಗೆ ಕೇವಲ 7 ಜನರ ಗುರುತು ಮಾತ್ರ ಪತ್ತೆಯಾಗಿದೆ. ಉಳಿದವರ ಗುರುತು ಪತ್ತೆಗಾಗಿ, ವಿಧಿವಿಜ್ಞಾನ ತಜ್ಞರ ತಂಡದಿಂದ ಡಿಎನ್ಎ ಪರೀಕ್ಷೆ ಮಾಡಿಸಲಾಗುತ್ತಿದೆ. ಅನೇಕರು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಟ್ಟಡದ ಮಾಲೀಕ ಅರೆಸ್ಟ್ ​: ಇತ್ತ, ಕಟ್ಟಡದ ಮಾಲೀಕ ಮನೀಶ್​ ಲಕ್ರಾನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಹರಿಯಾಣ ಮತ್ತು ದೆಹಲಿಯಲ್ಲಿ ತೀವ್ರ ಶೋಧ ನಡೆಸಿದ ಬಳಿಕ ಮಾಲೀಕ ಮನೀಶ್​ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಕೂಡ ಅಗ್ನಿ ದುರಂತಕ್ಕೀಡಾದ ಕಟ್ಟಡದ ಕೊನೆಯ ಮಹಡಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದ. ಬೆಂಕಿ ಕಾಣಿಸಿಕೊಂಡ ಬಳಿಕ ಕಟ್ಟಡದಿಂದ ಜಿಗಿದು ಪರಾರಿಯಾಗಿದ್ದ ಎಂದು ಡಿಸಿಪಿ ಸಮೀರ್ ಶರ್ಮಾ ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss