Thursday, March 28, 2024
spot_img
More

    Latest Posts

    ಡಿಸೆಂಬರ್-ಫೆಬ್ರವರಿಯಲ್ಲಿ ಕರ್ನಾಟಕ ಸೇರಿದಂತೆ ಈ 6 ರಾಜ್ಯಗಳಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

    ನವದೆಹಲಿ : ಕರ್ನಾಟಕ (Karntaka), ಆಂಧ್ರಪ್ರದೇಶ(Andhra Pradesh) , ರಾಯಲಸೀಮಾ(Rayalaseema) , ತಮಿಳುನಾಡು (Tamil Nadu), ಪುದುಚೇರಿ (Puducherry) ಮತ್ತು ಕೇರಳಕ್ಕೆ (Kerala) ಡಿಸೆಂಬರ್ ನಿಂದ ಫೆಬ್ರವರಿವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (India Meteorological Department) (ಐಎಂಡಿ) ಮುನ್ಸೂಚನೆ ನೀಡಿದೆ.

    ಆಂಧ್ರಪ್ರದೇಶ, ರಾಯಲಸೀಮಾ, ದಕ್ಷಿಣ ಒಳನಾಡು ಕರ್ನಾಟಕ, ತಮಿಳುನಾಡು, ಆಂತರಿಕ ಪುದುಚೇರಿ ಮತ್ತು ಕೇರಳಕ್ಕೆ ಡಿಸೆಂಬರ್ ನಿಂದ ಫೆಬ್ರವರಿವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

    ವಾಯುವ್ಯ ಭಾರತಕ್ಕೆ ಸಾಮಾನ್ಯ ಮಳೆ ಸಂಭವನೀಯತೆ ಗಿಂತ ಕಡಿಮೆ ಇರಲಿದ್ದು, ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಸಾಮಾನ್ಯ ಸರಾಸರಿ ತಾಪಮಾನ ಇರಲಿದೆ. ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶ, ಮಧ್ಯಪ್ರದೇಶ, ಪೂರ್ವ ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ನವೆಂಬರ್ ನಲ್ಲಿ ತಮಿಳುನಾಡಿನಲ್ಲಿ ಸುರಿದ ಭಾರೀ ಮಳೆಗೆ 8 ಜನರು ಮೃತಪಟ್ಟಿದ್ದರೆ. ಅಕ್ಟೋಬರ್ ನಲ್ಲಿ ಕೇರಳದಲ್ಲಿ ಧಾರಾಕಾರ ಮಳೆಗೆ 27 ಜನರು ಬಲಿಯಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಭಾರೀ ಮಳೆಗೆ 44 ಜನರು ಮೃತಪಟ್ಟಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss