Monday, November 28, 2022

ಉಡುಪಿ: ಕೆಲಸದ ಮನೆಯ ಚಿನ್ನ ಕದ್ದ ಹೋಮ್ ನರ್ಸ್ ಅಂದರ್

ಹಿರಿಯಡ್ಕ: ವೃದ್ಧ ಮಹಿಳೆಯ ಆರೈಕೆಗೆಂದು ಬಂದ ಹೋಮ್ ನರ್ಸ್ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾಗಿದ್ದಳು.ಇದೀಗ ಪೊಲೀಸರು...
More

  Latest Posts

  ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನೂತನ ಗೋಪುರಕ್ಕೆ ಶಿಲಾನ್ಯಾಸ

  ಮೂಡುಬಿದಿರೆ: ಶ್ರೀ ಆದಿಬ್ರಹ್ಮ ದೇವಸ್ಥಾನ ಶ್ರೀ ಕ್ಷೇತ್ರ ಬನ್ನಡ್ಕ ಪಡುಮಾರ್ನಾಡು ಇಲ್ಲಿ  ನೂತನ ಗೋಪುರದ ಶಿಲಾನ್ಯಾಸ ಮತ್ತು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.

  ಮಂಗಳೂರು: ಪತ್ನಿಯ ಕೊಲೆಗೈದ ಪತಿಯ ಬಂಧನ

  ಬಜ್ಪೆ: ಮಹಿಳೆಯೋರ್ವರನ್ನು ದೊಣ್ಣೆಯಿಂದ ಹೊಡೆದು ಕೊಲೆ‌ಮಾಡಿದ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ‌ ನಡೆದಿದೆ. ಸರಿತಾ(35)ಕೊಲೆಯಾದ ಮಹಿಳೆ.ಕುಡುಕನಾಗಿದ್ದ ಪತಿ ದುರ್ಗೇಶ್ ಸರಿತಾಗೆ...

  ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣ: ಕರಾವಳಿ ಜನರು ಸದಾ ಜಾಗೃತರಾಗಿರಬೇಕು – ಪೇಜಾವರ ಶ್ರೀ

  ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ...

  ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ತಂಡದಿಂದ ಹಲ್ಲೆ

  ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು...

  ತುಳುನಾಡ ರಕ್ಷಣಾ ವೇದಿಕೆ ಅಂತಾರಾಷ್ಟ್ರೀಯ ಗೌರವಾಧ್ಯಕ್ಷರಾದ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ರವರಿಗೆ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ”

  ತುಳುನಾಡ ರಕ್ಷಣಾ ವೇದಿಕೆ ಅಂತಾರಾಷ್ಟ್ರೀಯ ಗೌರವಾಧ್ಯಕ್ಷರಾದ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ರವರು ಹೊರ ದೇಶದಲ್ಲಿದ್ದರೂ ಕೂಡ ತುಳುನಾಡ ರಕ್ಷಣಾ ವೇದಿಕೆಯ ಪ್ರತೀ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದುಕೊಂಡು ನಿರಂತರ ಮಾರ್ಗದರ್ಶನ ಸಹಾಯ, ಸಹಕಾರಗಳನ್ನ ಮಾಡುತ್ತಾ ಬಂದಿದ್ದಾರೆ. ತುಳುನಾಡ ರಕ್ಷಣಾ ವೇದಿಕೆಯ ಉನ್ನತಿಗೆ ಶ್ರಮಿಸುತ್ತಿರುವ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ರವರ ಸೇವೆಯನ್ನು ಗುರುತಿಸಿ ಇದೀಗ UAE ಶಾರ್ಜಾ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಗೆ ಆಯ್ಕೆಯಾಗಿದ್ದಾರೆ‌.

  ದುಬೈ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಿದರು. ಇನ್ನೂ ಪ್ರಮುಖವಾಗಿ ಕರೋನದಂತಹ ಸಂಕಷ್ಟ ಸಮಯದಲ್ಲೂ ತುಳುನಾಡ ರಕ್ಷಣಾ ವೇದಿಕೆಯ ನೇತ್ರತ್ವದಲ್ಲಿ 62 ದಿನಗಳ ಕಾಲ ನಿರಂತರ ಅನ್ನ ದಾನದಲ್ಲಿ ಪ್ರಮುಖ ಸಹಕಾರ ನೀಡಿರುತ್ತಾರೆ.

  ಫ್ರಾಂಕ್ ಫೆರ್ನಾಂಡಿಸ್ ರವರು ಯುಎಇಯ ಹಲವಾರು ಸಾಮಾಜಿಕ ಸಂಸ್ಥೆಗಳಲ್ಲಿ ಪ್ರಾಯೋಜಕರಾಗಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಮತ್ತು ಅವರ ಕೊಡುಗೆಗಳೊಂದಿಗೆ ದತ್ತಿ ಕಾರ್ಯಕ್ರಮಗಳನ್ನು ಉತ್ತೇಜಿಸಿದ್ದರು. ಪಿಲಿಕುಳ ದ ನಿಸರ್ಗ ಧಾಮದಲ್ಲಿ 2017 ರಲ್ಲಿ ನಡೆದ ‘ತುಳುನಾಡೋಚ್ಚಾಯ 2017’ ಬೃಹತ್ ತುಳು ಆಯನೋ ಕಾರ್ಯಕ್ರಮದ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಗೊಂಡ ಅವರ ನಾಯಕತ್ವದಲ್ಲಿ 2 ದಿನಗಳ ಯಶಸ್ವಿ ಕಾರ್ಯಕ್ರಮ, 2019ರಲ್ಲಿ ಪುರಭವನದಲ್ಲಿ ಜರಗಿದ ತುಳುನಾಡ ರಕ್ಷಣಾ ವೇದಿಕೆಯ ದಶಮಾನೋತ್ಸವ ಸಮಾರಂಭ ತೌಳವ ಉಚ್ಚಯ 3 ದಿನಗಳ ಯಶಸ್ವಿ ಕಾರ್ಯಕ್ರಮ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  ತುಳುನಾಡ ರಕ್ಷಣಾ ವೇದಿಕೆಯ ದಶಮಾನೋತ್ಸವ ಸಮಾರಂಭ ತೌಳವ ಉಚ್ಚಯ 2019ರ ವಿಶ್ವ ತುಳುವರ ಸಮ್ಮೇಳನ ದ ಪ್ರತಿಷ್ಟಿತ ಅಂತಾರಾಷ್ಟ್ರೀಯ “ತೌಳವ ಚಕ್ರವರ್ತಿ ಪ್ರಶಸ್ತಿ” ಲಭಿಸಿದೆ. 2015ರಲ್ಲಿ ಉಡುಪಿ ಅಷ್ಟಮಠದ ಪೇಜಾವರ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿಯವರಿಂದ ‘ಪರ್ಯಾಯ ಪ್ರಶಸ್ತಿ’. 2015 ರಲ್ಲಿ ಮೂಡಬಿದ್ರೆಯ ಸಾವಿರ ಕಂಬ ಬಸದಿಯ ಜೈನ ಸ್ವಾಮೀಜಿಯವರಿಂದ ‘ಚಾರುಕೀರ್ತಿ ಭಟ್ಟಾರಕ’ ಪ್ರಶಸ್ತಿ,2016 ರಲ್ಲಿ ಯುಎಇಯ ಕರ್ನಾಟಕದ ಎಲ್ಲಾ ಪ್ರಮುಖ ಸಂಘಗಳು ತಮ್ಮ ವಾರ್ಷಿಕ ಆಚರಣೆಗಳಲ್ಲಿ ನಿರಂತರವಾಗಿ ಸನ್ಮಾನಿಸಿ ಪ್ರಶಸ್ತಿ ನೀಡಿವೆ.

  ಉಡುಪಿಯ ಕಿದಿಯೂರ್‌ನ ಭಾಗವತ್ ಗೀತಾ ಮಂಗಳ ಮಹೋತ್ಸವ ಸಮಾರಂಭದಲ್ಲಿ ‘ಗೀತಾ ಯೋಗಾನುಗ್ರಹ ಪ್ರಶಸ್ತಿ’ 2017 ರಲ್ಲಿ ಅನ್ನು ಕಲಾ ಜಗತ್ತು (ರಿ) ಮುಂಬೈ ಅವರಿಂದ ‘ಮೆಚ್ಚುಗೆ ಪ್ರಶಸ್ತಿ’ 2017 ರಲ್ಲಿ ಮೊಸಾಕೊ ಶಿಪ್ಪಿಂಗ್ ದುಬೈ ಸರ್ಕಾರಗಳ “ಇ-ಸರ್ವಿಸ್ ಎಕ್ಸಲೆನ್ಸ್ ಪ್ರಶಸ್ತಿ” 2017 ರಲ್ಲಿ ಯುನೈಟೆಡ್ ನೇಷನ್ಸ್ ಆರ್ಗನೈಸೇಶನ್ (ಯುಎನ್‌ಒ) ಫ್ರಾಂಕ್ ಅವರಿಗೆ ಮಲೇಷ್ಯಾದಲ್ಲಿ “ಗೌರವ ಡಾಕ್ಟರೇಟ್” ನೀಡಿತು. 2017 ರಲ್ಲಿ ಮಲೇಷ್ಯಾದಲ್ಲಿ ಯುಎಇಗಾಗಿ ಯುಎನ್‌ಒ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡಿದ್ದಾರು.

  ಇದೀಗ UAE ಶಾರ್ಜಾ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಆಯ್ಕೆಯಾಗಿರುವುದು ತುಳುನಾಡಿಗೆ ಹೆಮ್ಮೆಯ ವಿಷಯ ನಿಮ್ಮ ಸೇವೆ ಹೀಗೆ ಮುಂದುವರಿಯಲಿ ಎಂದು ತುಳುನಾಡ ರಕ್ಷಣಾ ವೇದಿಕೆ ಮತ್ತು ತುಳುನಾಡ ಸೂರ್ಯ ವೆಬ್ ಸೈಟ್ ಹಾಗೂ ತುಳುನಾಡ ಸೂರ್ಯ ಮಾಸಿಕ ಪತ್ರಿಕೆ ವತಿಯಿಂದ ಶುಭ ಹಾರೈಸುತ್ತೆವೆ.

  Latest Posts

  ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನೂತನ ಗೋಪುರಕ್ಕೆ ಶಿಲಾನ್ಯಾಸ

  ಮೂಡುಬಿದಿರೆ: ಶ್ರೀ ಆದಿಬ್ರಹ್ಮ ದೇವಸ್ಥಾನ ಶ್ರೀ ಕ್ಷೇತ್ರ ಬನ್ನಡ್ಕ ಪಡುಮಾರ್ನಾಡು ಇಲ್ಲಿ  ನೂತನ ಗೋಪುರದ ಶಿಲಾನ್ಯಾಸ ಮತ್ತು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.

  ಮಂಗಳೂರು: ಪತ್ನಿಯ ಕೊಲೆಗೈದ ಪತಿಯ ಬಂಧನ

  ಬಜ್ಪೆ: ಮಹಿಳೆಯೋರ್ವರನ್ನು ದೊಣ್ಣೆಯಿಂದ ಹೊಡೆದು ಕೊಲೆ‌ಮಾಡಿದ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ‌ ನಡೆದಿದೆ. ಸರಿತಾ(35)ಕೊಲೆಯಾದ ಮಹಿಳೆ.ಕುಡುಕನಾಗಿದ್ದ ಪತಿ ದುರ್ಗೇಶ್ ಸರಿತಾಗೆ...

  ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣ: ಕರಾವಳಿ ಜನರು ಸದಾ ಜಾಗೃತರಾಗಿರಬೇಕು – ಪೇಜಾವರ ಶ್ರೀ

  ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ...

  ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ತಂಡದಿಂದ ಹಲ್ಲೆ

  ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು...

  Don't Miss

  ವಿದ್ಯಾಭರಣ್ ಜೊತೆ ನಿಶ್ಚಿತಾರ್ಥ: ಮೊದಲಿಗೇ ಗೊತ್ತಾಗಿದ್ದು ಒಳ್ಳೆಯದಾಯ್ತು..ಒಂದು ವೇಳೆ ಮದುವೆ ಆದ್ಮೇಲೆ ಗೊತ್ತಾದ್ರೆ ಕಷ್ಟ ಆಗ್ತಿತ್ತು: ನಟಿ ವೈಷ್ಣವಿ ಗೌಡ

  ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ, ಕನ್ನಡ ಕಿರುತೆರೆಯ ನಟಿ ವೈಷ್ಣವಿ ಗೌಡ ನಿಶ್ಟಿತಾರ್ಥ ಇದೀಗ ವಿವಾದಕ್ಕೆ ಕಾರಣವಾಗಿದ್ದು, ನಿಶ್ಟಿತಾರ್ಥದ ಪೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ವೈಷ್ಣವಿ ನಿಶ್ಟಿತಾರ್ಥ...

  ಚಾರ್ಮಾಡಿ : ಆಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿ

  ಚಿಕ್ಕಮಗಳೂರು: ಅಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಚಾರ್ಮಾಡಿ...

  ಡಿ.2 ರಂದು ತುಳುವಿನಲ್ಲಿ ಕಾಂತಾರ ಬಿಡುಗಡೆ

  ಬೆಂಗಳೂರು: ಕೊನೆಗೂ ತುಳು ಭಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಡಿಸೆಂಬರ್ 2 ರಂದು ತುಳು ಬಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಯಾಗಲಿದೆ. ಕಾಂತಾರ ಇದೀಗ ಬಿಡುಗಡೆಯಾದ...

  ಮದುವೆಗೆ ಒಪ್ಪದ ಮಗಳನ್ನೇ ಕತ್ತು ಸೀಳಿ ಕೊಂದ ತಾಯಿ!

  ಕುಟುಂಬದವರು ನೋಡಿದ ಹುಡುಗನನ್ನು ಮದುವೆ ಆಗಲು ಒಪ್ಪಲಿಲ್ಲ ಅಂತ 20 ವರ್ಷದ ಮಗಳನ್ನೇ ತಾಯಿ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

  ಉಡುಪಿ: ರೋಸ್ ಸಮಾರಂಭದಲ್ಲಿ ಯುವತಿ ಕುಸಿದು ಬಿದ್ದು ಸಾವು

  ಉಡುಪಿ: ಕ್ರಿಶ್ಚಿಯನ್ನರ ಮನೆಯಲ್ಲಿ ನಡೆಯುವ ರೋಸ್ ಸಮಾರಂಭಕ್ಕೆ ಆಗಮಿಸಿದ್ದ ಯುವತಿಯೊಬ್ವರು ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಮೃತ ಯುವತಿಯನ್ನು ಹಾವಂಜೆ...