ಅಕ್ಟೋಬರ್ 02,2023 ರ ಬೆಳಿಗ್ಗೆ 9.00 ರಿಂದ ರಾಷ್ಟ್ರಪಿತ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಜೀ ಆದರ್ಶಮಾಜಿ, ದಿ. ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜನ್ಮ ದಿನದಂದು ಮೂಡುಬಿದಿರೆ ಇತಿಹಾಸ ಪ್ರಸಿದ್ಧ ಸಾವಿರ ಕಂಬ ಬಸದಿ ಪರಿಸರ ರಮಾರಾಣಿ ಶೋದ ಸಂಸ್ಥಾನ ಬಳಿ ಭಟ್ಟಾರಕ ಸಭಾಭವನದಲ್ಲಿ ಅಯುಷ್ಮಾನ್ ಭಾರತ ಕಾರ್ಯಕ್ರಮದ ಅಂಗವಾಗಿ ಮೂಡುಬಿದಿರೆ ಸರಕಾರಿ ಅರೋಗ್ಯ ಕೇಂದ್ರ ವತಿಯಿಂದ ದವಲತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಆಶ್ರಯ ದಲ್ಲಿ ಉಚಿತ ಅರೋಗ್ಯ ತಪಾಸಣೆ ಶಿಬಿರ ನೆರವೇರಿತು ಸುಮಾರು ನೂರಕ್ಕೊ ಅಧಿಕ ಮಂದಿಗೆ ವಿವಿಧ ರೀತಿಯ ಉಚಿತ ಪರೀಕ್ಷೆ ಯನ್ನು ನಡೆಸಲಾಯಿತು.
ತಜ್ಞ ವೈದ್ಯರುಗಳಾದ ಡಾ. ಅಕ್ಷತಾ ನಾಯಕ್ ದಂತ ವೈದ್ಯಾಧಿ ಕಾರಿ, ಡಾ ಡಿತೇಶ್ ಹೃದಯ ತಜ್ಞರು ಕೆ ಯಂ ಸಿ
ಮoಗಳೂರು, ಡಾ ಅಲಿಯಾ ಪಿಂಟೋ ಚರ್ಮ ರೋಗ ತಜ್ಞರು, ಡಾ ನಿತಿನ್ ಜನರಲ್ ಮೆಡಿಸಿನ್, ಡಾ ಮಾಯಾ ಮಕ್ಕಳ ತಜ್ಞರು, ಡಾ ಅವಿನಾಶ್ ನೇತೃ ತಜ್ಞರು ಚಿಕಿತ್ಸೆ ಅರಸಿ ಬಂದ ಎಲ್ಲಾ ರಿಗೂ ವಿವಿಧ ಚಿಕಿತ್ಸೆ, ಸಲಹೆ ಸೂಚನೆ ನೀಡಿಧೈರ್ಯ ತುಂಬಿದರು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಸರಳ ಸಮಾರಂಭ ದಲ್ಲಿ ಅಧ್ಯಕ್ಷ ತೆ ವಹಿಸಿ ಸರ್ವರಿಗೂ ಅರೋಗ್ಯ ಅಭಿಯಾನ ಅಡಿಯಲ್ಲಿ ಅಯುಷ್ಮಾನ್ ಭಾರತ
ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊoಡು
ಕೇಂದ್ರ ಸರಕಾರ ರಾಜ್ಯ ಸರಕಾರ ಸರ್ವರ ಪ್ರಶಂಸೆ ಗೆ ಪಾತ್ರ ವಾಗಿದೆ ದೇಶದ ಸ್ವಾತ o ತ್ರ ಜಾಗೊ ಸಾಮಾಜಿಕ ನ್ಯಾಯ ಕ್ಕಾಗಿ ಹೋರಾಡಿ ಮಹಾತ್ಮಾ ರಾದ ಗಾಂಧಿ ಸರಳ ರಾಜಕೀಯ ನಾಯಕ ಶಾಸ್ತ್ರೀ ಜೀ ಹುಟ್ಟುಹಬ್ಬದ ಸಂಧರ್ಭ ಇಂತಹ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತೋಷ ಈ ಶಿಬಿರ ದಲ್ಲಿ ಪಾಲ್ಗೊಂಡ ಸರ್ವರಿಗೂ ಭಗವಂತ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.
ಸರ್ವರಿಗೂ ಸ್ಮರಣಿಕೆಯಾಗಿ ಪುಸ್ತಕನೀಡಿ ಗೌರವಿಸಲಾಯಿತು ಶ್ರೀ ಮಠ ದ ವ್ಯವ ಸ್ಥಾಪಕ ಸಂಜಯಂತ ಕುಮಾರ್, ಪುರಸಭಾ ಸದಸ್ಯೆ ಶ್ವೇತಾ, ಮೂಡುಬಿದಿರೆ ಆಸ್ಪತ್ರೆ ಹಿರಿಯ ಶಿಬ್ಬಂದಿ ಸುಶೀಲಾ ಉಪಸ್ಥಿತರಿದ್ದರು.
ಹಾಗೂ ಆಸ್ಪತ್ರೆ ಯ ಸುಮಾರು ಇಪ್ಪತ್ತು ಶಿಬ್ಬಂದಿ ವರ್ಗದವರು ಹಾಜರಿದ್ದು ವೈದ್ಯಕಿಯ ತಪಾಸಣೆ ಸಂಧರ್ಭ ಎಲ್ಲಾ ರೀತಿಯ ಸಹಕಾರ ನೀಡಿದರು.